×
Ad

ಹನೂರು: ಕ್ಷೇತ್ರದ ವಿವಿಧೆಡೆ ಕಾಂಗ್ರೆಸ್ ಚುನಾವಣಾ ಪ್ರಚಾರ

Update: 2018-04-29 22:30 IST

ಹನೂರು,ಎ,29 :ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ನೀಡಿದ್ದ ಭರವಸೆಗಳನ್ನುಈಡೇರಿಸಿ ನುಡಿದಂತೆ ನಡೆದಿದೆ ಎಂದು ಶಾಸಕ ಆರ್ ನರೇಂದ್ರ ರಾಜೂಗೌಡ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ರಾಮಾಪುರ ಸಮೀಪದ ದಿನ್ನಳ್ಳಿ, ಮಾರಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿ 144 ಸಮುದಾಯ ಭವನಗಳು, ನಿರ್ಮಾಣ, 35000 ಎಲ್.ಪಿ.ಜಿ ಗ್ಯಾಸ್ ಸಂಪರ್ಕ, 18500 ಮನೆಗಳು, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ 220 ಬೋರ್‍ವೇಲ್‍ಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಭರವಸೆ ಬಹುತೇಕ ಈಡೇರಿಸಿದ್ದು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ದೀನ ದಲಿತರ ಪರವಾಗಿ ಕೆಲಸ ಮಾಡಿದೆ ಎಂದ ಅವರು, ಮೇ 12 ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಪ್ಪದೇ ಮತಹಾಕುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.

ಮೂರು ತಿಂಗಳ ಒಳಗೆ ರಸ್ತೆ ಕಾಮಗಾರಿ ಪೂರ್ಣ: ಈ ಭಾಗದ ದಿನ್ನಳ್ಳಿ ರಸ್ತೆ ಲೋಕೋಪಯೋಗಿ ಇಲಾಖೆಗೂ ಸೇರದ ಎಂ.ಡಿ.ಆರ್ (ಮೇಜರ್ ಡಿಸ್ಟ್ರಿಕ್ಟ್ ರೋಡ್) ಗೇ ಸೇರಿದ್ದು, ಶಿವಮೊಗ್ಗದ ತೀರ್ಥಳ್ಳಿ ಬಿಟ್ಟರೆ ಸುಮಾರು 72 ಕಿ.ಮೀ ರಸ್ತೆ ಕಾಮಗಾರಿ ನಮ್ಮ ಕ್ಷೇತ್ರದ ಭಾಗಕ್ಕೆ ಮಾತ್ರ ಈ ಯೋಜನೆ ದೊರೆತಿದೆ. ಇನ್ನು ಕೇವಲ 3 ಕಿ.ಮೀ ರಸ್ತೆಗೆ ಅನುದಾನ ಲಭಿಸಬೇಕಾಗಿದೆ. ರಸ್ತೆ ಕಾಮಗಾರಿ ಟೆಂಡರ್ ಕೆಲಸ ಮುಗಿದಿದ್ದು, ಗುತ್ತಿಗೆದಾರರು ಕಾಮಗಾರಿ ಪ್ರಾರಂಭ ಮಾಡಬೇಕಾಗಿದೆ. ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಲು ಗುತ್ತಿಗೆದಾರರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜು, ತಾಪಂ ಸದಸ್ಯರಾದ ಜವಾದ್ ಅಹಮ್ಮದ್, ತಾಲೂಕು ಪಂಚಾಯತ್ ಸದಸ್ಯೆ ಪಾರ್ವತಿಬಾಯಿ, ದಿನ್ನಳ್ಳಿ ಪಂಚಾಯತ್ ಅದ್ಯಕ್ಷ ಸಮೀರ್, ಮಾಜಿ ಪ.ಪಂ ಅದ್ಯಕ್ಷ ರಾಜೂಗೌಡ  ಮಾದೇಶ್, ಮಹೇಶ್, ರಾಮಾಪುರ ಪ್ರಭುಸ್ವಾಮಿ, ಪ್ರಕಾಶ್, ಮಂಗಲ ಪುಟ್ಟರಾಜು, ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News