ಶೃಂಗೇರಿ: ಜೆಸಿಬಿಎಂ ಪಿಯು ಕಾಲೇಜಿಗೆ ಶೇ.92 ಫಲಿತಾಂಶ
ಶೃಂಗೇರಿ, ಎ.30: ಇಲ್ಲಿನ ಜೆ.ಸಿ.ಬಿ.ಎಂ.ಕಾಲೇಜಿನ ಪದವಿ ಪೂರ್ವ ವಿಭಾಗದ 2017-18ರ ಸಾಲಿನ ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ. 92 ಫಲಿತಾಂಶ ಲಭಿಸಿದ್ದು, ಒಟ್ಟು ಪರೀಕ್ಷೆಗೆ 273 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 251 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಅತ್ಯುತ್ತಮ ಶ್ರೇಣಿಯಲ್ಲಿ 54 ವಿದ್ಯಾರ್ಥಿಗಳು, ಪ್ರಥಮ ದರ್ಜೆಯಲ್ಲಿ 152 ವಿದ್ಯಾರ್ಥಿಗಳು, ದ್ವಿತೀಯ ದರ್ಜೆಯಲ್ಲಿ 45 ವಿದ್ಯಾರ್ಥಿಗಳು ತೇರ್ಗಡೆಯಾಗಿರುತ್ತಾರೆ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು.ಅಶ್ವಿನಿ ಎಚ್.ಜಿ. ಶೇ.97 (581 ಅಂಕಗಳು) ಅಂಕಗಳೊಂದಿಗೆ ಪ್ರಥಮಸ್ಥಾನ, ಕು.ಸುಪ್ರೀತಾ ಬಿ.ಎಸ್ ವಿಜ್ಞಾನ ವಿಭಾಗದಲ್ಲಿ ಶೇ.95 (568 ಅಂಕಗಳು) ದ್ವಿತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದ ಶಶಾಂಕ್ ಕೆ.ಎಸ್. ಶೇ.94 (565 ಅಂಕಗಳು) ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.