ಸಂಸ್ಕೃತದಲ್ಲಿ 98 ಅಂಕ: ಶಿವಮೊಗ್ಗದ ಸುಹಾ ವಿಶಿಷ್ಟ ಸಾಧನೆ
Update: 2018-04-30 20:47 IST
ಶಿವಮೊಗ್ಗ, ಎ.30: ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸುಹಾ, ಸಂಸ್ಕೃತದಲ್ಲಿ 98 ಅಂಕ ಗಳಿಸುವ ಮೂಲಕ ವಿಶಿಷ್ಟ ಸಾಧನೆ ಗೈದಿದ್ದು, ಒಟ್ಟು 600ರಲ್ಲಿ 566 ಅಂಕಗಳಿಸಿ ಶೇ. 94.33 ಫಲಿತಾಂಶ ಪಡೆದಿದ್ದಾರೆ.
ಬಯಾಲಜಿ 99, ಗಣಿತ 94, ಕೆಮಿಸ್ಟ್ರಿ 93, ಇಂಗ್ಲಿಷ್ 92, ಫಿಜಿಕ್ಸ್ 90, ಹಾಗೂ ಸಂಸ್ಕೃತ 98 ಅಂಕಗಳು ಸೇರಿ ಒಟ್ಟು 600ರಲ್ಲಿ 566 ಅಂಕಗಳನ್ನು ಪಡೆಯುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಶಿವಮೊಗ್ಗದ ನ್ಯಾಷನಲ್ ಸೂಪರ್ ಮಾರ್ಕೆಟ್‌ನ ಇಸ್ಮಾಯೀಲ್ ಅವರ ಪುತ್ರಿ.