ಹಾಸನ: ಮೇ.1 ರಂದು ಅರಕಲಗೂಡಿಗೆ ಅಮಿತ್ ಶಾ ಆಗಮನ
ಹಾಸನ,ಎ.30: ಮೇ.1 ರಂದು ಅರಕಲಗೂಡು ಕ್ಷೇತ್ರಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಿ ಪಕ್ಷದ ಪ್ರಚಾರ ಮಾಡಲಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಯೋಗಾರಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಅರಕಲಗೂಡು ತಾಲೂಕು ಕ್ರೀಡಾಂಗಣಕ್ಕೆ ಮದ್ಯಾಹ್ನ 3 ಗಂಟೆಗೆ ಅಮಿತ್ ಶಾ ಪಾಲ್ಗೊಳ್ಳುವರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮದ್ಯಾಹ್ನ 1 ಗಂಟೆಗೆ ಸಕಲೇಶಪುರಕ್ಕೆ ಬರಲಿದ್ದಾರೆ. ಬೇಲೂರಿಗೆ 3 ಗಂಟೆಗೆ ಆಗಮಿಸಲಿದ್ದಾರೆ ಎಂದರು.
ಇದುವರೆಗೂ ತಮ್ಮ ಅಧಿಕಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಯಾವ ಪ್ರಾಮಾಣಿಕ ಕೊಡುಗೆ ನೀಡಿರುವುದಿಲ್ಲ. ಇದನ್ನೆಲ್ಲಾ ತಿಳಿದಿರುವ ಜನತೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು. ಈ ಚುನಾವಣೆಯು ಅತಂತ್ರವಾಗಲಿ ಎಂದು ಹೆಚ್.ಡಿ. ರೇವಣ್ಣ ದಿನಾಲು ಜಪ ಮಾಡುತ್ತಿದ್ದಾರೆ. ಬಿಜೆಪಿ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದು ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಸಿ. ರಾಜೇಶ್, ಬೊಮ್ಮೇಗೌಡ, ಮಂಡಲ ಅಧ್ಯಕ್ಷ ವಿಶ್ವನಾಥ್, ಮರಿಗೌಡ ಇದ್ದರು.