ತುಮಕೂರು: ಜಿಲ್ಲೆಗೆ ಶೇ.64.29 ರಷ್ಟು ಫಲಿತಾಂಶ

Update: 2018-04-30 18:24 GMT

ತುಮಕೂರು,ಎ.30: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಈ ಬಾರಿ ಶೇ.64.29ರಷ್ಟು ಫಲಿತಾಂಶ ಲಭಿಸಿದೆ. 

ಕಲಾ ವಿಭಾಗ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗ ಸೇರಿ ಜಿಲ್ಲೆಯ ಒಟ್ಟು 22400 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 14,400 ವಿದ್ಯಾರ್ಥಿಗಳು ತೇರ್ಗಡೆ ಹೊಂದುವ ಮೂಲಕ ರಾಜ್ಯದಲ್ಲಿ 21 ನೇ ಸ್ಥಾನ ಪಡೆದಿದೆ.  

ವಾಣಿಜ್ಯ ವಿಭಾಗದಲ್ಲಿ ನಗರದ ವಿದ್ಯಾನಿಧಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಎನ್.ಚಂದನ ಅವರು 593, ವಿಜ್ಞಾನ ವಿಭಾಗದಲ್ಲಿ ಶಿರಾ ತಾಲೂಕು ಪ್ರೆಸಿಡೆನ್ಸಿ ಪದವಿಪೂರ್ವ ಕಾಲೇಜಿನ ಶ್ರೇಯಸ್ 590 ಹಾಗೂ ಕಲಾವಿಭಾಗದಲ್ಲಿ ತಿಪಟೂರು ಬಸವೇಶ್ವರ ಪದವಿಪೂರ್ವ ಕಾಲೇಜಿನ ರವಿಕುಮಾರ್ ಅವರು 581 ಅಂಕ ಪಡೆಯುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ನಸೀಮ್ ಉನ್ನಿಸಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News