ಮೈಸೂರು: ಮೋದಿ ವಿರುದ್ಧ ಪ್ರತಿಭಟಿಸಲು ತೆರಳುತ್ತಿದ್ದ ವಿದ್ಯಾರ್ಥಿಗಳ ಬಂಧನ
Update: 2018-05-01 00:01 IST
ಮೈಸೂರು,ಎ.30: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರತಿಭಟಿಸಲು ತೆರಳುತಿದ್ದ ವಿದ್ಯಾರ್ಥಿಗಳನ್ನು ನಗರದ ಟೌನ್ ಹಾಲ್ ಬಳಿ ಪೊಲೀಸರು ಬಂಧಿಸಿದ್ದಾರೆ.
ಮೇ.1 ರಂದು ಚಾಮರಾಜನಗರದ ಸಂತೇಮರಹಳ್ಳಿಯಲ್ಲಿ ಮೋದಿ ಕಾರ್ಯಕ್ರಮ ನಿಗದಿಯಾಗಿತ್ತು. ಅಲ್ಲಿ ಮೋದಿ ವಿರುದ್ಧ ಪ್ರತಿಭಟಿಸಲು ತೆರಳುತ್ತಿದ್ದ 'ಉದ್ಯೋಗಕ್ಕಾಗಿ ಯುವಜನರು' ಸಂಘಟನೆಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಯುವಜನರಿಗೆ ಉದ್ಯೋಗ ನೀಡುತ್ತೇವೆ ಎಂಬ ನರೇಂದ್ರ ಮೋದಿ ಹೇಳಿಕೆಯಿಂದ ನೊಂದಿರುವ ವಿದ್ಯಾರ್ಥಿಗಳು ಅವರ ವಿರುದ್ಧ ಪ್ರತಿಭಟಿಸಲು ಕಾಲ್ನಡಿಗೆಯಲ್ಲಿ ಸಂತೇಮರಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ಟೌನ್ ಹಾಲ್ ಬಳಿ ಸಂಘಟನೆಯ ಮುಖ್ಯಸ್ಥ ವಾಸು ಸೇರಿದಂತೆ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.