ಶಿವಮೊಗ್ಗ: 94 ಶೇ. ಅಂಕದೊಂದಿಗೆ ತೇರ್ಗಡೆಯಾದ ಮೆಕ್ಯಾನಿಕ್ ಪುತ್ರ
Update: 2018-05-01 21:03 IST
ಶಿವಮೊಗ್ಗ, ಮೇ 1: ಇತ್ತೀಚೆಗೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ನಗರದ ಪೇಸ್ ಕಾಲೇಜ್‍ನ ವಿದ್ಯಾರ್ಥಿ ಹಮ್ಜದ್ ಫೈಜಾನ್‍ರವರು ವಿಜ್ಞಾನ ವಿಭಾಗದಲ್ಲಿ ಶೇ. 94 ರಷ್ಟು ಅಂಕ ಪಡೆದು ತೇರ್ಗಡೆಗೊಂಡಿದ್ದಾರೆ.
ಕೆ.ಆರ್.ಪುರಂ ರಸ್ತೆಯ ನಿವಾಸಿ, ದ್ವಿಚಕ್ರ ವಾಹನದ ಮೆಕ್ಯಾಕಾನಿಕ್ ವೃತ್ತಿಯ ಸೊಹೈಲ್ ಅಹಮದ್ ಹಾಗೂ ಸಲ್ಮಾ ದಂಪತಿ ಪುತ್ರನಾಗಿರುವ ಹಮ್ಜದ್ ಫೈಜಾನ್ ಗಣಿತದಲ್ಲಿ 100, ರಾಸಾಯನಶಾಸ್ತ್ರದಲ್ಲಿ 99, ಭೌತಶಾಸ್ತ್ರದಲ್ಲಿ 97, ಜೀವಶಾಸ್ತ್ರದಲ್ಲಿ 96 ಅಂಕ ಪಡೆದುಕೊಂಡಿದ್ದಾರೆ.
'ತಂದೆ-ತಾಯಿಯ ಪ್ರೋತ್ಸಾಹ ಹಾಗೂ ಕಾಲೇಜ್‍ನ ಉಪನ್ಯಾಸಕರ ಸಹಕಾರ ತಮ್ಮ ಈ ಸಾಧನೆಗೆ ಮುಖ್ಯ ಕಾರಣವಾಗಿದೆ. ಹಾಗೆಯೇ ಪ್ರತಿನಿತ್ಯ ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದೆ. ಕಾಲೇಜ್‍ನ ತರಗತಿಗಳಿಗೆ ತಪ್ಪದೆ ಹಾಜರಾಗುತ್ತಿದ್ದೆ. ಇದರಿಂದ ಪರೀಕ್ಷೆ ಎದುರಿಸುವುದು ಸುಲಭವಾಯಿತು' ಎಂದು ಹಮ್ಜದ್ ಫೈಜಾನ್‍ರವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.