ದಾವಣಗೆರೆ: ಶ್ರೀ ಸಿದ್ದೇಶ್ವರ ಪದವಿಪೂರ್ವ ಕಾಲೇಜ್ ವಿಜ್ಞಾನ ವಿಭಾಗಕ್ಕೆ ಉತ್ತಮ ಫಲಿತಾಂಶ
ದಾವಣಗೆರೆ,ಮೇ.01: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶ್ರೀ ಸಿದ್ದೇಶ್ವರ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗಕ್ಕೆ ಉತ್ತಮ ಫಲಿತಾಂಶ ಬಂದಿದ್ದು, ಕಾಲೇಜಿನ ವಿದ್ಯಾರ್ಥಿ ನಿಖಿಲ್ ಡಿ. ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ಉತ್ತಿರ್ಣನಾಗಿದ್ದಾನೆ ಎಂದು ಪ್ರಾಂಶುಪಾಲ ಮಂಜಪ್ಪ ಕೆ.ಎಂ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿಗೆ ಕನ್ನಡ, ಹಿಂದಿ, ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್, ಫೀಜಿಕ್ಸ್‍ನಲ್ಲಿ ಶೇ.100, ಕೆಮಿಸ್ಟ್ರಿ, ಗಣಿತ-98.64, ಬಯಾಲಜಿಯಲ್ಲಿ 99.3 ಶೇಕಡಾವರು ಫಲಿತಾಂಶ ಬಂದಿದೆ. ಉಪನ್ಯಾಸಕ ಉತ್ತಮ ಮಾರ್ಗದರ್ಶನ, ವಿದ್ಯಾರ್ಥಿಗಳ ಕಠಿಣ ಶ್ರಮ ಉತ್ತಮ ಫಲಿತಾಂಶಕ್ಕೆ ಕಾರಣವಾಗಿದೆ ಎಂದರು.
ವಿದ್ಯಾರ್ಥಿ ನಿಖಿಲ್ ಉತ್ತಮವಾಗಿ ಪ್ರಯತ್ನ ಮಾಡಿದ್ದಾನೆ. 600ಕ್ಕೆ 588 ಅಂಕಗಳೊಂದಿಗೆ (ಶೇ. 98) ಉತ್ತಿರ್ಣನಾಗಿದ್ದಾನೆ. ಕೆಮಿಸ್ಟ್ರಿಯಲ್ಲಿ 97 ಅಂಕ ಪಡೆದಿದ್ದಾನೆ. ಇನ್ನೂ ಎರಡು ಅಂಕಗಳು ಬರಬೇಕಾಗಿತ್ತು. ಇದಕ್ಕಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದಾಗಿ ಅವರು ಹೇಳಿದರು.
ವಿದ್ಯಾರ್ಥಿ ನಿಖಿಲ್ ಮಾತನಾಡಿ, ಜಿಲ್ಲೆಗೆ ಮೊದಲಿಗನಾಗಿ ತೇರ್ಗಡೆ ಹೊಂದುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಭೌತ-99, ರಸಾಯನ- 97, ಗಣಿತ- 100, ಬಯಾಲಜಿ-99, ಕನ್ನಡ-97, ಇಂಗ್ಲಿಷ್-96 ಅಂಕ ಪಡೆದಿದ್ದೇನೆ. ಪ್ರತಿನಿತ್ಯ ಕುಕ್ಕವಾಡದಿಂದ ನಗರಕ್ಕೆ ಬಂದು ಅಭ್ಯಾಸ ಮಾಡುತ್ತಿದ್ದೆ. ಉಪನ್ಯಾಸಕ ಉತ್ತಮ ಮಾರ್ಗದರ್ಶನ, ಪಾಲಕರ ಪ್ರೋತ್ಸಾನ ನನಗೆ ದೊರಕಿದೆ. ಮುಂದೆ ಡಾಕ್ಟರ್ ಆಗಬೇಕೆಂದು ಬಯಸಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಕ ಧನಂಜಯ್, ಫೀಜಿಕ್ಸ್ ಉಪನ್ಯಾಸಕ ನಾಗಭೂಷಣ್ ಇದ್ದರು.