ಹನೂರು: ಶ್ರೀ ವಿವೇಕಾನಂದ ಪಪೂ ಕಾಲೇಜಿಗೆ ಉತ್ತಮ ಫಲಿತಾಂಶ
ಹನೂರು,ಮೇ.01 : 2017-18ನೇ ಸಾಲಿನ ಪಿಯು ಫಲಿತಾಂಶದಲ್ಲಿ ಪಟ್ಟಣದ ಶ್ರೀ ವಿವೇಕಾನಂದ ಪಪೂ ಕಾಲೇಜು ಶೇಕಡ 98.11 ಫಲಿತಾಂಶವನ್ನು ಪಡೆದುಕೊಂಡಿದೆ.
ಕಳೆದ ಮಾರ್ಚ್‍ನಲ್ಲಿ ನಡೆದ ಪಿಯು ಪರೀಕ್ಷೆಯಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇಕಡ 100 ರಷ್ಟು ಹಾಗೂ ವಿಜ್ಞಾನ ವಿಭಾಗದಲ್ಲಿ 96.75 ಫಲಿತಾಂಶವನ್ನು ಪಡೆದುಕೊಂಡಿದೆ. 2 ವಿಭಾಗದಿಂದ 10 ವಿದ್ಯಾರ್ಥಿಗಳು ಅತ್ಯುತ್ತಮ, 35 ಮಂದಿ ಪ್ರಥಮ ಹಾಗೂ 9 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಇದರಲ್ಲಿ ವಾಣಿಜ್ಯ ವಿಭಾಗದಲ್ಲಿ ಸಂಗೀತಾ ಪ್ರಥಮ, ಅನುಶ್ರೀ ದ್ವಿತೀಯ ಹಾಗೂ ಲೋಕೇಶ್ ತೃತೀಯ ಸ್ಥಾನ ಪಡೆದಿದ್ದರೆ, ವಿಜ್ಞಾನ ವಿಭಾಗದಲ್ಲಿ ಕಲ್ಯಾಣಿ ಪ್ರಥಮ, ಜಯಶ್ರೀ ದ್ವಿತೀಯ ಹಾಗೂ ತನುಜಾ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಉತ್ತಮ ಫಲಿತಾಂಶದ ಮೂಲಕ ಕಾಲೇಜಿಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯದರ್ಶಿ ಸುರೇಶ್‍ನಾಯ್ಡು, ಸಂಚಾಲಕ ರಾಜೇಂದ್ರನ್, ಪ್ರಾಂಶುಪಾಲ ಮಧುಸೂದನ್ ಹಾಗೂ ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.