ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳ ಮೂಲಕ ರಾಜ್ಯದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ: ಎ.ಆರ್.ಕೃಷ್ಣಮೂರ್ತಿ
ಕೊಳ್ಳೇಗಾಲ,ಮೇ.1 ಕಾಂಗ್ರೆಸ್ ಸರ್ಕಾರವು ಹಲವಾರು ಜನಪರ ಯೋಜನೆಗಳ ನೀಡುವ ಮೂಲಕ ರಾಜ್ಯದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.
ಕೊಳ್ಳೇಗಾಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಹೊಸೂರು ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ದೇವಾಲಯದಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರತಿಗ್ರಾಮಗಳಿಗೆ ತೆರಳಿ ಮತಯಾಚಿಸಿದರು.
ರಾಜ್ಯದಲ್ಲಿ ಕಳೆದ ನಾಲ್ಕುವರೆ ವರ್ಷದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರವು ಅನ್ನಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದೆ. ರೈತರ ಸಮಸ್ಯೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮತದಾರರು ಕೈಜೋಡಿಸಬೇಕು ಎಂದರು.
ಕಾಂಗ್ರೆಸ್ ಪಕ್ಷದ ಸಾಧನೆ ಮತ್ತು ಎನ್‍ಡಿಎ ಸರ್ಕಾರದ ವೈಫಲ್ಯತೆಯನ್ನು ಮತದಾರರಿಗೆ ತಿಳಿಸುವ ಮೂಲಕ ಈ ಬಾರಿ ಚುನಾವಣೆಯಲ್ಲಿ ಎದುರುಸುತ್ತೇವೆ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆ ನೂರಕ್ಕೇ 95 ರಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಸರ್ಕಾರದ ಎಲ್ಲಾ ಸಾಧನೆಗಳನ್ನು ಪ್ರತಿಯೊಂದು ಮನೆಗಳಿಗೆ ತೆರಳಿ ಜನರಿಗೆ ತಿಳಿಸಿಲಾಗಿದೆ. ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಹೇಳಿದ ಯಾವುದೇ ಕಾರ್ಯಕ್ರಮವನ್ನು ಯಶಸ್ವಿ ಮಾಡಿಲ್ಲ. ಶೂನ್ಯ ಅಕೌಂಟ್‍ನ ಮೂಲಕ ಬಡಜನರಿಗೆ ಹಣ ನೀಡುವುದಾಗಿ ಇನ್ನೂ ಸಹಾ ಹಾಕಿಲ್ಲ, ರೈತರ ಸಾಲ ಮಾಡಿಲ್ಲ ಇದನ್ನೆಲ್ಲಾ ಮತದಾರರಿಗೆ ತಿಳಸುವ ಮೂಲಕ ಈ ಬಾರಿ ಜನರು ಕಾಂಗ್ರೆಸ್ ಪಕ್ಷವನ್ನು ಮೆಚ್ಚಿ ಅಭೂತಪೂರ್ವ ಬೆಂಬಲ ನೀಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಿನಕಹಳ್ಳಿ ರಾಚಯ್ಯ, ಜಿಪಂ ಉಪಾಧ್ಯಕ್ಷ ಯೋಗಿಶ್, ಸದಸ್ಯೆ ಉಮಾವತಿ ಸಿದ್ದರಾಜು, ಮುಖಂಡರುಗಳಾದ ತೋಟೇಶ್, ಟಗರಪುರ ರಾಜಣ್ಣ, ಮುಸ್ತಾಕ್, ಪ್ರಭುಪ್ರಸಾದ್, ಚೇತನ್, ಕಂದಹಳ್ಳಿ ನಂಜುಂಡ, ಗೋಳಿಪುರ ನಂಜುಂಡಸ್ವಾಮಿ, ರಾಜು, ಮಧು, ವಿಶ್ವನಾಥ್, ಮರಿಸ್ವಾಮಿ, ವೆಂಕಟರಾಮಶೆಟ್ಟಿ, ಜವರಯ್ಯ, ನಂಜುಂಡಯ್ಯ, ಧನರಾಜ್, ಪಿ.ಮರಿಸ್ವಾಮಿ ಇತರರು ಇದ್ದರು.