ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಛೋಟಾ ರಾಜನ್ ತಪ್ಪಿತಸ್ಥ

Update: 2018-05-02 06:52 GMT

ಹೊಸದಿಲ್ಲಿ, ಮೇ 2: ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ಛೋಟಾ ರಾಜನ್ ತಪ್ಪಿತಸ್ಥ ಎಂದು ತೀರ್ಪಿತ್ತಿರುವ ವಿಶೇಷ ನ್ಯಾಯಾಲಯವೊಂದು ಪ್ರಕರಣದ ಮತ್ತೋರ್ವ ಅರೋಪಿ ಜಿಗ್ನಾ ವೋರಾನನ್ನು ಖುಲಾಸೆಗೊಳಿಸಿದೆ.

2011ರ ಜೂನ್ 11ರಂದು ತಮ್ಮ ಮನೆಗೆ ಹಿಂದಿರುಗುತ್ತಿದ್ದ ಹಿರಿಯ ಪತ್ರಕರ್ತ ಜೆ ಡೇಯವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ರಾಜನ್, ಮತ್ತೋರ್ವ ಪತ್ರಕರ್ತ ಜಿಗ್ನಾ ವೋರಾ ಸೇರಿ ಇತರ 10 ಮಂದಿ ವಿಚಾರಣೆಯನ್ನೆದುರಿಸಿದ್ದರು. ಜೆ ಡೇ ಬರುತ್ತಿರುವ ಬಗ್ಗೆ ರಾಜನ್ ಗೆ ಮಾಹಿತಿ ನೀಡಿದ ಆರೋಪ ಜಿಗ್ನಾ ವೋರ ಮೇಲಿತ್ತು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News