ಚಿಕ್ಕಮಗಳೂರು: ಸಾಲಬಾಧೆ; ವಿಷ ಸೇವಿಸಿ ರೈತ ಆತ್ಮಹತ್ಯೆ

Update: 2018-05-02 17:24 GMT

ಚಿಕ್ಕಮಗಳೂರು, ಮೇ 2: ನೀರಿನ ಕೊರತೆಯಿಂದಾಗಿ ತೆಂಗು ಹಾಗೂ ಅಡಿಕೆ ತೋಟಗಳು ಒಣಗಿದ್ದರಿಂದ ಸಾಲಗಾರರಿಗೆಹೆದರಿದ ರೈತರೊಬ್ಬರು ಚಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ತರೀಕೆರೆ ತಾಲೂಕಿನಲ್ಲಿ ವರದಿಯಾಗಿದೆ.

ತಾಲೂಕಿನ ಅಜ್ಜಂಪುರ ಹೋಬಳಿಯ ಶಾನುಭೋಗನಹಳ್ಳಿ ಗ್ರಾಮದ ರೈತ ಒಂಕಾರಪ್ಪ(49) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಈತ ತೆಂಗು ಹಾಗೂ ಅಡಿಕೆ ತೋಟದಲ್ಲಿ ಲಕ್ಷಾಂತರ ರೂ.ಸಾಲ ಮಾಡಿ ಕೊಳವೆಬಾವಿಯನ್ನು ತೆಗೆದಿದ್ದು, ನೀರು ಸಿಗದೇ ಅಡಿಕೆ, ತೆಂಗಿನ ತೋಟಗಳು ಒಣಗಿದ್ದವು. ಇದರಿಂದ ಅವರು ಸಾಲ ತೀರಿಸುವುದು ಹೇಗೆಂದು ಚಿಂತಿತರಾಗಿದ್ದರು ಎಂದು ಕುಟುಂಬದವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದ ಓಂಕಾರಪ್ಪ ಮರಳಿ ಮನೆಗೆ ಬಾರದ್ದನ್ನು ಕಂಡ ಮನೆಯವರು ತೋಟದಲ್ಲಿ ಹುಡುಕಾಡಿದಾಗ ಓಂಕಾರಪ್ಪ ಅವರ ಮೃತದೇಹ ಹಾಗೂ ವಿಷದ ಬಾಟಲಿಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News