×
Ad

ದಾವಣಗೆರೆ: ದಾಖಲೆ ರಹಿತ 9,93,400 ರೂ. ನಗದು ವಶ

Update: 2018-05-02 23:13 IST

ದಾವಣಗೆರೆ,ಮೇ.02: ಮಂಗಳವಾರ ಹರಪನಹಳ್ಳಿ ವಿಧಾನ ಸಭಾ ವ್ಯಾಪ್ತಿಯ ನಂದಿಬೇವೂರು ಚೆಕ್‍ಪೊಸ್ಟ್‍ನಲ್ಲಿ ಎಸ್.ಎಸ್.ಟಿ ತಂಡದ ಅಧಿಕಾರಿ ವೀರೇಶ ಕಲ್ಮನಿ ಅವರು ತಪಾಸಣೆ ಕೈಗೊಂಡ ವೇಳೆ ಹರಪನಹಳ್ಳಿ ತಾಲೂಕಿನ ಇಂಗಳಗುಂದಿ ಗ್ರಾಮದ ಶಿವಮೂರ್ತಪ್ಪ ಎಂಬವರ ಬಳಿ ರೂ. 6,01,000/- ದಾಖಲೆ ರಹಿತ ನಗದು ಪತ್ತೆಯಾಗಿದೆ. 

ಅದೇ ರೀತಿ ಹರಿಹರ ವಿಧಾನ ಸಭಾ ವ್ಯಾಪ್ತಿಯ ರಾಘವೇಂದ್ರ ಮಠ ಚೆಕ್‍ಪೊಸ್ಟ್ ನಲ್ಲಿ ಎಸ್.ಎಸ್.ಟಿ ತಂಡದ ಅಧಿಕಾರಿ ವೀರಭದ್ರಪ್ಪ ಅವರು ತಪಾಸಣೆ ಕೈಗೊಂಡ ವೇಳೆ ಹಿರೇಕೆರೂರು ತಾಲೂಕಿನ ರಟ್ಟಿಹಳ್ಳಿ ಗ್ರಾಮದ ಜಬೀಬುಲ್ಲಾ ಎಂಬುವರ ಬಳಿ ರೂ. 3,92,400/- ದಾಖಲೆ ರಹಿತ ನಗದು ಪತ್ತೆಯಾಗಿದೆ. 
ಈ ದಾಖಲೆ ರಹಿತ ನಗದನ್ನು ವಶಕ್ಕೆ ಪಡೆದು, ಸೂಕ್ತ ದಾಖಲೆ ನೀಡಿ ನಗದನ್ನು ಹಿಂಪಡೆಯುವಂತೆ ತಿಳಿಸಿ ಸಂಬಂಧಿಸಿದ ತಾಲೂಕು ಖಜಾನೆಯಲ್ಲಿರಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News