×
Ad

ಸುಪ್ರೀಂ ಕೋರ್ಟ್ ಸೂಚನೆ ಪಾಲಿಸಲು ಸಾಧ್ಯವಿಲ್ಲ: ಸಚಿವ ಎಂ.ಬಿ.ಪಾಟೀಲ್

Update: 2018-05-03 18:13 IST

ಬೆಂಗಳೂರು, ಮೇ 3: ಸುಪ್ರೀಂ ಕೋರ್ಟ್ ಸೂಚನೆಯಂತೆ ತಮಿಳುನಾಡಿಗೆ ನಾಲ್ಕು ಟಿಎಂಸಿ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ. ನಮ್ಮ 4 ಅಣೆಕಟ್ಟುಗಳಲ್ಲಿ ಕೇವಲ 9 ಟಿಎಂಸಿಯಷ್ಟು ನೀರಿದ್ದು, ಕುಡಿಯಲು-ನಮ್ಮ ಬೆಳೆಗಳಿಗೆ ನೀರಿನ ಕೊರತೆ ಇದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಣೆ ನೀಡಿದ್ದಾರೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿಯೇ ಕುಡಿಯಲು ನೀರಿಲ್ಲದ ಸಂಕಷ್ಟದ ಸ್ಥಿತಿಯಲ್ಲಿ ಕೋರ್ಟ್ ಸೂಚನೆ ಪಾಲಿಸಲು ಅಸಾಧ್ಯ. ಹೀಗಾಗಿ ಮೇ 4 ಈ ಬಗ್ಗೆ ಕೋರ್ಟ್‌ಗೆ ಕಾನೂನು ತಜ್ಞರ ಮೂಲಕ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ರಾಜ್ಯದ ಜಲಾಶಯಗಳಲ್ಲಿನ ವಾಸ್ತವ ಸ್ಥಿತಿಯನ್ನು ಕಾನೂನು ತಜ್ಞರ ಜತೆ ಚರ್ಚಿಸಿ ಕೋರ್ಟ್‌ಗೆ ತಿಳಿಸಲಾಗುವುದು. ಅಲ್ಲದೆ, ಈಗಾಗಲೇ ತಮಿಳುನಾಡಿಗೆ ಡಿಸೆಂಬರ್ ಅಂತ್ಯವರೆಗೆ ಅವರ ನೀರಿನ ಪಾಲನ್ನು ಒದಗಿಸಲಾಗಿದೆ ಎಂದ ಅವರು, ಕೋರ್ಟ್ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದು ಪುನರುಚ್ಛರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News