ಶಿವಮೊಗ್ಗ : ವಿದ್ಯುತ್ ಶಾಕ್‍ನಿಂದ ಬಿಹಾರ ಮೂಲದ ಕಾರ್ಮಿಕ ಸಾವು
Update: 2018-05-03 19:17 IST
ಶಿವಮೊಗ್ಗ, ಮೇ. 3: ಮನೆಯೊಂದರಲ್ಲಿ ಟೈಲ್ಸ್ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಕಾರ್ಮಿಕನೋರ್ವ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. ಲಕ್ಷ್ಮಣ್‍ಕುಮಾರ್ ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ.
ರಾತ್ರಿ ವೇಳೆ ಮನೆಯೊಂದರಲ್ಲಿ ಟ್ಯೂಬ್‍ಲೆಟ್ ನೆರವಿನೊಂದಿಗೆ ಟೈಲ್ಸ್ ಸ್ವಚ್ಚಗೊಳಿಸುವ ಕೆಲಸ ಮಾಡುವಾಗ ವಿದ್ಯುತ್ ಶಾಕ್‍ಗೆ ತುತ್ತಾಗಿದ್ದರು. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.