ಉದ್ಯಮಿಗಳ ಸಾಲಮನ್ನಾ ಮಾಡಿದ ಮೋದಿಗೆ ಮತ ಕೇಳುವ ಹಕ್ಕಿಲ್ಲ : ಸಿ.ಎಂ. ಇಬ್ರಾಹಿಂ

Update: 2018-05-03 14:11 GMT

ಹರಿಹರ,ಮೇ.3: ಕೇಂದ್ರ ಮಾಜಿ ಸಚಿವ ರಾಜ್ಯ ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಮಾತನಾಡಿ, ರಾಷ್ರೀಕೃತ ಬ್ಯಾಂಕುಗಳಲ್ಲಿ ಸಾಲಮಾಡಿರುವ ರಾಜ್ಯದ ಸುಮಾರು 22,770 ರೈತರ 42 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬದಲಾಗಿ, ಉದ್ಯಮಿಗಳ ಸಾಲಮನ್ನಾ ಮತ್ತು ರಕ್ಷಣೆಗಾಗಿ ನೋಟ್ ರದ್ದತಿ ಜಾರಿಗೆ ತಂದಿರುವ  ಪ್ರಧಾನಿ ಮೋದಿಗೆ ರಾಜ್ಯದ ರೈತರ ಮತಕೇಳುವ ಹಕ್ಕಿಲ್ಲವೆಂದು ಹೇಳಿದರು.

ಕಳೆದ 5 ವರ್ಷಗಳಲ್ಲಿ ರಾಜ್ಯಾಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರ ರಾಜ್ಯದ ಎಲ್ಲಾ ಬಡವರಿಗೆ ಉಚಿತ ಅಕ್ಕಿ ನೀಡುವುದರೊಂದಿಗೆ ಅವರ ಹಸಿವು ನೀಗಿಸಿದೆ. ವಿವಿಧ ಯೋಜನೆಗಳ ಮೂಲಕ ಕಾಂಗ್ರೆಸ್ ಮನೆಮಾತಾಗಿದೆ ಎಂದರು.

ನಗರದ ಗಾಂಧಿ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ವೇದಿಕೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ ಎಸ್.ರಾಮಪ್ಪ ಪರ ಮತಯಾಚಿಸಿ ಅವರು ಮಾತನಾಡಿದರು.

ನಗರದ ಗಾಂಧಿ ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ವೇದಿಕೆಯಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ ಎಸ್.ರಾಮಪ್ಪ ಪರ ಮತಯಾಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ 5 ವರ್ಷಗಳಲ್ಲಿ ರಾಜ್ಯಾಡಳಿತ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಸರ್ಕಾರ ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ ಜಾರಿಗೆ ತಂದಿರುವ ಹಲವಾರು ಭಾಗ್ಯಗಳ ಮತ್ತು ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಿಂದ ರಾಜ್ಯದಲ್ಲಿ ಸಾಧಿಸಿರುವ ಅಭಿವೃದ್ಧಿಗಳ ಕುರಿತು ವಿವರಿಸಿ ಹರಿಹರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪಗೆ ಮತ ನೀಡುವಂತೆ ಜನತೆಯಲ್ಲಿ ಮನವಿ ಮಾಡಿಕೊಂಡರು.

ನವ ಕರ್ನಾಟಕ ಕಾಂಗ್ರೆಸ್ ಗುರಿ:ಕಳೆದ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನಾವು ನೀಡಿದ್ದ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಮತ್ತೆ ಮತ ನೀಡುವುದರೊಂದಿಗೆ ನಮಗೆ ಅಧಿಕಾರ ನೀಡಿದಲ್ಲಿ ನವ ಕರ್ನಾಟಕ ನಿರ್ಮಾಣವೇ ನಮ್ಮ ಗುರಿ. ನಮ್ಮದೇನಿದ್ದರೂ ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋಮು ಗಲಭೆಯನ್ನೆಬ್ಬಿಸುತ್ತಿರುವ ಬಿಜೆಪಿ, ಆರೆಸ್ಸೆಸ್, ಬಜರಂಗದಳದ ವಿರುದ್ದವೇ ನಮ್ಮ ಹೋರಾಟ. ಆದ್ದರಿಂದ ಕೋಮುವಾದಿ ಬಿಜೆಪಿ ಮತ್ತು ಅವಕಾಶವಾದಿ ಜೆಡಿಎಸ್ ಪಕ್ಷಗಳಿಗೆ ಮತ ನೀಡಿ ತಮ್ಮ ಮತದ ಮೌಲ್ಯ ಹಾಳು ಮಾಡಿಕೊಳ್ಳುವುದಕ್ಕಿಂತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಸರ್ವರು ಮುಂದಾಗಬೇಕೆಂದರು.

ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್‍ಗೆ:
ನಗರಸಭಾ ಸದಸ್ಯ ಬಿ.ಕೆ. ಸೈಯದ್‍ ರೆಹಮಾನ್, ಜಾಕೀರ್ ಅಹ್ಮದ್, ಸೈಯದ್‍ ರೋಷನ್, ಯಾಸಿನ್‍ಸಾಬ್, ಸೈಯದ್‍ ಜಾಕೀರ ಅಹ್ಮದ್, ನಯಾಜ್‍ ಅಹ್ಮದ್, ನಝೀರ್ ಹ್ಮದ್, ಅಬ್ದುಲ್ ರಹೀಮ್ ಸೇರಿದಂತೆ ಹಲವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‍ಗೆ ಸೇರಿಕೊಂಡರು.
ಈ ಸಂದರ್ಭ ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಕಾಂಗ್ರೆಸ್ ಅಭ್ಯರ್ಥಿ ಎಸ್. ರಾಮಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ ಮಂಜಪ್ಪ, ಎಐಸಿಸಿ ವಿಕ್ಷಕರಾದ ನೀಲಂಭರಂ, ಬಲ್‍ಕೀಸ್ ಬಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ. ಹನುಮಂತಪ್ಪ, ನ್ಯಾಯವಾದಿ ನಾಗೇಂದ್ರಪ್ಪ, ಎಂ.ಬಿ ಅಣ್ಣಪ್ಪ ಇತರರು ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News