ಕ್ಷುಲ್ಲಕ ಕಾರಣಕ್ಕೆ ನೇಣಿಗೆ ಶರಣಾದ ಬಾಲಕ
Update: 2018-05-03 21:43 IST
ಮೂಡಿಗೆರೆ, ಮೇ.3: ಕ್ಷುಲ್ಲಕ ಕಾರಣಕ್ಕೆ ದೀಪಕ್ 13 ವರ್ಷದ ಬಾಲಕನೋರ್ವ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಸಮೀಪ ಬೀಜವಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಬೀಜವಳ್ಳಿ ಗ್ರಾಮದ ಮಹೇಶ್ ಮತ್ತು ಅಶ್ವಿನಿ ದಂಪತಿಯ ಪುತ್ರನಾದ ದೀಪಕ್ ಎಂಬುವ ಬಾಲಕ ಉಡುಪಿಯಲ್ಲಿ 9ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದನು. ಬೇಸಿಗೆ ರಜೆ ಇದಿದ್ದರಿಂದ ಮೂಡಿಗೆರೆಗೆ ಬಂದಿದ್ದ. ಗುರುವಾರ ಸಂಜೆ ದೀಪಕ್‍ನ ತಾಯಿ ಪಟ್ಟಣಕ್ಕೆ ತೆರಳಿದ್ದರು. ತನ್ನನ್ನು ಪಟ್ಟಣಕ್ಕೆ ಕರೆದೊಯ್ಯಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಕೂಡಲೇ ಅಕ್ಕಪಕ್ಕದ ಮನೆಯ ಜನರು ಹಗ್ಗ ಕತ್ತರಿಸಿ ಬಾಲಕನನ್ನು ಎಂಜಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.