ಕರ್ನಾಟಕ ಚುನಾವಣೆಯಲ್ಲಿ ಕೋಮುವಾದಿಗಳನ್ನು ಸೋಲಿಸಬೇಕು : ಜಿಗ್ನೇಶ್ ಮೇವಾನಿ
ಹಾಸನ,ಮೇ.3: ಚುನಾವಣೆಗೆ ಒಂದು ವಾರ ಮಾತ್ರ ಉಳಿದಿದೆ ನಿಮ್ಮ ಶಕ್ತಿಯನ್ನು ಹಿಂಡಿ ಬಿಜೆಪಿ ಸೋಲಿಸಿ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು
ನಗರದ ಕಲಾಭವನದಲ್ಲಿ ನಡೆದ ‘ಸಂವಿದಾನ ಉಳಿವಿಗಾಗಿ ಸಂಕಲ್ಪ ಸಮಾವೇಶ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕ ಚುನಾವಣೆಯಲ್ಲಿ ನಾವು ಕೋಮುವಾದಿಗಳನ್ನು ಸೋಲಿಸಲೇ ಬೇಕು ಎಂದರು.
ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೊದಲು ಅತಂತ್ರ ಪಲಿತಾಂಶ ಬಂದರೆ ಬಿಜೆಪಿಯೊಂದಿಗೆ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಕಾತರಿ ಪಡಿಸಿಕೊಳ್ಳಿ ಎಂದರು.
ನಾಲ್ಕು ವರ್ಷದಲ್ಲಿ ತಾವು ಮಾಡಿರುವ ಸಾದನೆಯನ್ನು ನಾಲ್ಕು ನಿಮಿಷಗಳಲ್ಲಿ ಹೇಳಿ. ಯಾವ ರೈತರಿಗೆ ಬೆಂಬಲ ಬೆಲೆ ನೀಡಿದ್ದಿರಿ. ದಲಿತರಿಗೆ, ಅಲ್ಪಸಂಖ್ಯಾತರಿಗೆ ಮಹಿಳೆಯರಿಗೆ ಏನು ಮಾಡಿದ್ದೀರಿ. ಉತ್ತರಿಸಿ ಎಂದು ಪ್ರಶ್ನಿಸಿದರು.
80 ಸಾವಿರ ಕೋಟಿ ಬ್ಯಾಂಕ್ ಹಗರಣದ ಬಗ್ಗೆ ಮೌನ ಮುರಿದು ಮಾತಾನಾಡಿ. ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಸಾದ್ಯವಾಗದಿದ್ದರೆ ಹಿಮಾಲಯಕ್ಕೆ ತೆರಳಿ ಮೌನಿ ಬಾಬಾ ಆಗಿ ಎಂದು ಮೋದಿಯ ವಿರುದ್ದ ಕಿಡಿಕಾರಿದರು.
ದೇಶದ ಜಿಲ್ಲಾ ಕೇಂದ್ರದಲ್ಲಿ ಶ್ರೀ ಸಮಾನ್ಯ ನಿಗೆ ಚಿಕಿತ್ಸೆ ದೊರೆಯುತ್ತಿಲ್ಲ, ಶಿಕ್ಷಣ ಸಿಗುತ್ತಿಲ್ಲ ಎಲ್ಲವೂ ಮರಾಟವಾಗಿದೆ. ರೈತರ ಆತ್ಮಹತ್ಯೆ, ನಿರುದ್ಯೋಗ ಬಗ್ಗೆ ಮಾತನಾಡಿದರೆ ಇವರು ಹಸುವಿನ ಗೊಬ್ಬರದ ಬಗ್ಗೆ ಮಾತನಾಡುತ್ತರೆ . ರಾಜ್ಯ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸದಿದ್ದರೆ ಲೋಕ ಸಭಾ ಚುನಾವಣೆಯಲ್ಲಿ ಸೋಲಿಸಲು ಸಾದ್ಯವಾಗುವುದಿಲ್ಲ ಎಂದರು.
ಎ.ಕೆ. ಸುಬ್ಬಯ್ಯ ರಚಿತವಾದ ‘ದೇಶ ಅಪತ್ತಿನಲ್ಲಿದೆ’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಎಪ್ಪತ್ತು ವರ್ಷಗಳಲ್ಲಿ ಯಾವ ಪಕ್ಷದಿಂದಲೂ ನಮಗೆ ನ್ಯಾಯ ಸಿಗಲಿಲ್ಲ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೂ ಅವರನ್ನು ಪ್ರಶ್ನಿಸಬೇಕು ಎಂದರು.
ದೇಶವಾಳುವುದು ಬಿಜೆಪಿಗೆ ಗೊತ್ತಿಲ್ಲ ತಲೆಯಲ್ಲಿರುವ ಸಗಣಿ ಮತ್ತು ಗಂಜಲವನ್ನು ನಮ್ಮ ಜನ ಸಮಾನ್ಯರ ಮೇಲೆ ಹೇರಲಾಗುತ್ತಿದೆ ಎಂದರು.
ನಟ ಪ್ರಕಾಶ್ ರೈ, ಸಮಾಜಿಕ ಹೋರಾಟಗಾರ ಸಿರಿಮನೆ ನಾಗಾರಾಜ್, ಕೋಮು ಸೌಹಾರ್ದ ವೇದಿಕೆಯ ಕೆ ಎಲ್ ಅಶೋಕ್, ಸಾಹಿತಿ ರೂಪ ಹಾಸನ, ಮೂಮೆಂಟ್ ಫಾರ್ ಜಸ್ಟೀಸ್ ಸಂಘಟನೆಯ ಮುಖಂಡರಾದ ಇರ್ಷಾದ್ ದೇಸಾಯಿ, ಮಾನವ ಬಂದುತ್ವ ವೇದಿಕೆಯ ಮಹಾಂತಪ್ಪ, ಪತ್ರಕರ್ತ ಹೆತ್ತೂರ್ ನಾಗರಾಜ್, ನೇಮಾನ್, ಫಾರುಕ್ ಪಾಶ, ಇಲಿಯಾಸ್ ಬೇಗ್. ಶಂಕರ್ ರಾಜ್. ರೌಫ್. ಸಯ್ಯದ್ ತಾಜ್. ಕುಮಾರಸ್ವಾಮಿ. ನಾರಾಯಣ್ ದಾಸ್, ಸ್ಟೀವನ್ ಪ್ರಕಾಶ್. ಸಂದೇಶ್. ಅಮೀರ್ ಜಾನ್. ಕೆಲಬತ್ತಿ ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು..