ಚಿಕ್ಕಮಗಳೂರು: ಇಇಎಸ್ ಕಾಲೇಜಿನ ಝುಲ್ಫಿಯಾ ಕಲಾ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ
Update: 2018-05-04 22:47 IST
ಚಿಕ್ಕಮಗಳೂರು, ಮೇ 4: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ನಗರದ ಎಂಇಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಝುಲ್ಪಿಯಾ 557 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಕೆ.ಪಿ.ಶುಭಶ್ರೀಗೆ ವಾಣಿಜ್ಯಶಾಸ್ತ್ರ, ಲೆಕ್ಕಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದಲ್ಲಿ ನೂರಕ್ಕೆ ನೂರರಷ್ಟು ಅಂಕಗಳಿಸಿದ್ದು, ಅನ್ವಿತ್ ಕುಲಾಲ್ ವಿಜ್ಞಾನ ವಿಭಾಗದಲ್ಲಿ ಶೇ.95 ಅಂಕ ಗಳಿಸಿ ಪ್ರಥಮ ರ್ಯಾಂಕ್ ಪಡೆದಿದ್ದಾರೆ.
ಶೇ.82.16 ಫಲಿತಾಂಶ ಕಾಲೇಜಿಗೆ ಲಭಿಸಿದ್ದು, 47 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 154 ವಿದ್ಯಾರ್ಥಿಗಳು ಪ್ರಥಮ, 37 ವಿದ್ಯಾರ್ಥಿಗಳು ದ್ವಿತೀಯ ಹಾಗೂ 20 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯೆ ಎಂ.ಬಿ.ಜಯಶ್ರೀ ತಿಳಿಸಿದ್ದಾರೆ.