×
Ad

ಹಾಸನ: ಎರಡು ಮನೆಗಳಿಂದ ಕಳ್ಳತನ

Update: 2018-05-06 22:37 IST

ಹಾಸನ,ಮೇ.06: ಎರಡು ಮನೆಗಳ ಮುಂಬಾಗಿಲಿನಿಂದ ಒಳ ಪ್ರವೇಶ ಮಾಡಿರುವ ಕಳ್ಳರು ಮನೆಯಲ್ಲಿರುವ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. 

ನಗರದ ಕುವೆಂಪು 8ನೇ ಅಡ್ಡ ರಸ್ತೆ, ಎಲ್‍ಐಸಿ ಕಚೇರಿ ಪಕ್ಕದಲ್ಲಿ ವಾಸವಾಗಿರುವ ಐಟಿಐ ಕಾಲೇಜು ಉಪನ್ಯಾಸಕ ಸುರೇಶ್ ಮತ್ತು ಗುತ್ತಿಗೆದಾರ ಕಿರಣ್ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಸುರೇಶ್ ಮತ್ತು ಸರೋಜ ಎಂಬುವರು ತನ್ನ ಮಗನಿಗೆ ನೀಟ್ ಪರೀಕ್ಷೆ ಇರುವುದರಿಂದ ಶನಿವಾರ ಮದ್ಯಾಹ್ನ ಬೆಂಗಳೂರಿಗೆ ತೆರಳಿದ್ದಾರೆ. ಮನೆಗೆ ಲಾಕ್ ಹಾಕಲಾಗಿತ್ತು. ಹಾಗೆಯೇ ಪಕ್ಕದ ಮತ್ತೊಬ್ಬರು ಗುತ್ತಿಗೆದಾರ ಕಿರಣ್ ಎಂಬುವರು ತಮ್ಮ ಮಕ್ಕಲಿಗೆ ರಜೆ ಇದ್ದುದರಿಂದ ಅರಕಲಗೂಡಿಗೆ ತೆರಳಿದ್ದಾರೆ. ಇವರಿಬ್ಬರ ಮನೆಯ ಬಗ್ಗೆ ನಿಗಾವಹಿಸಿರುವ ಕದೀಮರು ರಾತ್ರೋರಾತ್ರಿ ಬಾಗಿಲನ್ನು ಮೀಟಿ ಮನೆ ಒಳ ಪ್ರವೇಶ ಮಾಡಿದ್ದಾರೆ. ಸುರೇಶ್ ಸಂಬಂಧಿಕರು ಹೇಳುವಂತೆ ಮನೆಯಲ್ಲಿ ಅಂತಹ ಬೆಲೆ ಬಾಳುವ ವಸ್ತುವನ್ನು ಇಡಲಾಗಿಲ್ಲ ಎನ್ನಲಾಗಿದೆ. ಗುತ್ತಿಗೆದಾರರ ಮನೆಯ ಬಗ್ಗೆ ಪೂರ್ಣ ಮಾಹಿತಿ ಲಬ್ಯವಾಗಿಲ್ಲ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ.

3ನೇ ವಾರ್ಡಿನ ನಗರಸಭೆ ಸದಸ್ಯ ಹೆಚ್.ಎಂ. ಸುರೇಶ್ ಕುಮಾರ್ ಅವರು ಬಿಜೆಪಿ ಪರ ಮನೆಮನೆಗೆ ತೆರಳಿ ಭಾನುವಾರ ಬೆಳಿಗ್ಗೆ ಮತಯಾಚನೆ ಮಾಡುವ ವೇಳೆ ಸುರೇಶ್ ಮನೆ ಬಾಗಿಲು ತೆರೆದಂತೆ ಇದ್ದು, ಇವರು ಬಾಗಿಲು ಬಡಿದು ಕೂಗಿದರೂ ಯಾರು ಬಾರದೆ ಇದ್ದಾಗ ಮನೆ ಬಗ್ಗೆ ವಿಚಾರಿಸಿದ್ದಾರೆ. ಈ ಮನೆಯವರು ಊರಿನಲ್ಲೆ ಇಲ್ಲದಿರುವುದು ಕೇಳಿ ಬಂದಿದ್ದು, ನಂತರ ಪೊಲಿಸ್ ಠಾಣೆಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News