ತರೀಕೆರೆ: ಸ್ವಾಮಿ ವಿವೇಕಾನಂದ ಶಾಲೆಗೆ ಸತತ 5ನೇ ಬಾರಿ ಶೇ. 100 ಫಲಿತಾಂಶ
ತರೀಕೆರೆ, ಮೇ 7: ತರೀಕೆರೆ ಪಟ್ಟಣದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಬಂದಿದ್ದು, ಸತತ 5ನೇ ಬಾರಿ ಈ ಸಾಧನೆ ಮಾಡಿದೆ. ಪರೀಕ್ಷೆ ಬರೆದ ಒಟ್ಟು 23 ವಿದ್ಯಾರ್ಥಿಗಳಲ್ಲಿ 09 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಮತ್ತು 13 ವಿದ್ಯಾರ್ಥಿಗಳು ಪ್ರಥಮ ದರ್ಜೆ ಶ್ರೇಣಿಯಲ್ಲಿ ಹಾಗೂ 1 ವಿದ್ಯಾರ್ಥಿಯು ದ್ವಿತೀಯ ದರ್ಜೆ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಹೆಸರು ತಂದಿರುತ್ತಾರೆ.
ಟಿ.ವಿ ಸೋನಾಲಿಕ ರವರು 625 ಕ್ಕೆ 595 ಅಂಕ ಗಳಿಸಿದ್ದು, ಕನ್ನಡ 125ಕ್ಕೆ 125 ಅಂಕ ಪಡೆದಿದ್ದಾಳೆ. ಆಂಗ್ಲ 98, ಹಿಂದಿ 97, ಗಣಿತ 94, ವಿಜ್ಞಾನ 88, ಸಮಾಜ 93 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಜಿ.ಎ. ಆಕಾಶ್ 625ಕ್ಕೆ 588 ಅಂಕ, ಕನ್ನಡ 122, ಆಂಗ್ಲ 93, ಹಿಂದಿ 97, ಗಣಿತ 95, ವಿಜ್ಞಾನ 87, ಸಮಾಜ 94 ಅಂಕ ಪಡೆದು ಶಾಲೆಗೆ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಟಿ.ಎಂ. ಜೀವನ್ ಕುಮಾರ್ 625 ಕ್ಕೆ 581 ಅಂಕ ಪಡೆದು ಕನ್ನಡದಲ್ಲಿ 121, ಆಂಗ್ಲ 94, ಹಿಂದಿ 85, ಗಣಿತ 95, ವಿಜ್ಞಾನ 88, ಸಮಾಜ 98 ಅಂಕ ಹಾಗೂ ಎಸ್ ಹೇಮಂತ್ ಪವಾರ್ 625ಕ್ಕೆ 564 ಅಂಕ ಪಡೆದು ಕನ್ನಡದಲ್ಲಿ 120, ಆಂಗ್ಲ 94, ಹಿಂದಿ 95, ಗಣಿತ 93, ವಿಜ್ಞಾನ 82, ಸಮಾಜ 80 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಟಿ. ಜಿ. ಶಶಾಂಕ ಇವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ.