×
Ad

ಹರಪನಹಳ್ಳಿ: ಬಿಜೆಪಿ ಅಭ್ಯರ್ಥಿ ಪರವಾಗಿ ಅಮಿತ್ ಶಾ ರೋಡ್ ಶೋ

Update: 2018-05-07 23:26 IST

ಹರಪನಹಳ್ಳಿ,ಮೇ.07: ಪಟ್ಟಣದ ಹರಿಹರ ರಸ್ತೆಯಿಂದ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾ ಅವರು ಹರಪನಹಳ್ಳಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಕರುಣಾಕರ ರೆಡ್ಡಿ ಅವರ ಪರವಾಗಿ ರೋಡ್ ಶೋ ಮೂಲಕ ಮತಯಾಚಿದರು. 

ಹರಿಹರ ರಸ್ತೆಯ ವೃತ್ತದಿಂದ ಆರಂಭವಾದ ರೋಡ್ ಶೋ ನಲ್ಲಿ ಅಪಾರ ಬೆಂಬಲಿಗರು ಸೇರಿದ್ದರು. ನಂತರ ರಸ್ತೆ ಉದ್ದಕ್ಕೂ ಮೋದಿ, ಮೋದಿ ಎಂಬ  ಘೋಷಣೆ ಕೂಗುತ್ತಾ ಅಪಾರ ಬೆಂಬಲಿಗರೊಂದಿಗೆ ಅಮಿತ್ ಶಾ ರವರು ತೆರೆದ ವಾಹನದಲ್ಲಿ ಅಗಮಿಸಿದರು.

ನಂತರ ಬಿಜೆಪಿ ಅಮಿತ್ ಶಾ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಕರ್ನಾಟಕದಿಂದ ಕಿತ್ತು ಹಾಕಬೇಕು. ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ವಿದ್ಯಾವಂತ ಯುವಕರಿಗೆ ಲ್ಯಾಪ್ ಟಾಪ್ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಜಿ.ಕರುಣಾಕರರೆಡ್ಡಿ ಯವರನ್ನು ಆಯ್ಕೆ ಮಾಡಿ ವಿಧಾನ ಸಭೆಗೆ ಕಳಿಸಿ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು. ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಸೋಲಿಸಿ ಠೇವಣಿ ಇಲ್ಲದಂತೆ ಮಾಡಿ ಎಂದು ಹೇಳಿದರು.

ಮಾಜಿ ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಹಾಲಿ ಶಾಸಕ ಎಂ.ಪಿ.ರವೀಂದ್ರ ರವರು ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಿ 371 ಜೆ ಸೌಲಭ್ಯ ಸಿಗುತ್ತದೆ ಎಂದು ಸುಳ್ಳು ಹೇಳಿಕೊಂಡು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಧಿಕ್ಕರಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, 2008 ಚುನಾವಣೆಯಲ್ಲಿ ಜಿ.ಕರುಣಾಕರ ರೆಡ್ಡಿಯವರನ್ನು 27 ಸಾವಿರ ಅಂತರ ಮತಗಳಿಂದ ಜಯಗಳಿಸಿದ ಅದೇ ರೀತಿ ಮೇ.12 ರಂದು ನಡೆಯಲಿರುವ ಚುನಾವಣೆಯಲ್ಲಿ ಅತಿ ಹೆಚ್ಚಿನ ಮತದಿಂದ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಜಯ ಗಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು. 

ರೋಡ್ ಶೋ ವೇಳೆ ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಜಿಲ್ಲಾ ಉಪಧ್ಯಕ್ಷ ಎಂ.ಪಿ.ನಾಯ್ಕ. ತಾ.ಅಧ್ಯಕ್ಷ.ಕೆ.ಲಕ್ಷ್ಮಣ್, ಕಣವಿಹಳ್ಳಿ ಮಂಜುನಾಥ್, ಮುಖಂಡರಾದ ದುರಗಪ್ಪ, ಕೆಂಚಪ್ಪ, ಸಣ್ಣ ಹಾಲಪ್ಪ, ಹುಚ್ಚೆಂಗಪ್ಪ, ಮತ್ತು ಇತರರು ಇದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News