×
Ad

ಬಡ ಜನತೆಯ ಧ್ವನಿ ವಿಧಾನಸೌಧದೊಳಗೆ ಪ್ರತಿಧ್ವನಿಸಲು ಅಬ್ದುಲ್ ಮಜೀದ್‌ರನ್ನು ಗೆಲ್ಲಿಸಿ: ಡಾ.ದ್ವಾರಕನಾಥ್

Update: 2018-05-08 13:22 IST

ಮೈಸೂರು, ಮೇ 8: ಕರ್ನಾಟಕ ರಾಜ್ಯದ ಬಡವರ, ಶೋಷಿತರ, ದಮನಿತರ, ರೈತರ, ವಿದ್ಯಾರ್ಥಿಗಳ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದ ಧ್ವನಿ ವಿಧಾನ ಸೌಧದೊಳಗೆ ಪ್ರತಿಧ್ವನಿಸಲು ಈ ಬಾರಿ ನರಸಿಂಹರಾಜ ಕ್ಷೇತ್ರದಿಂದ ಅಬ್ದುಲ್ ಮಜೀದ್ ಅವರನ್ನು ಗೆಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ಡಾ.ಸಿ.ಎಸ್. ದ್ವಾರಕನಾಥ್ ಮನವಿ ಮಾಡಿದರು.

ಉದಯಗಿರಿಯಲ್ಲಿ ನಡೆದ ಎಸ್‌ಡಿಪಿಐ ಚುನಾವಣಾ ಪ್ರಚಾರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 17 ವರ್ಷಗಳಿಂದ ನರಸಿಂಹರಾಜ ಕ್ಷೇತ್ರವನ್ನು ಪ್ರತಿನಿಧಿಸಿದವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಹಾಗೂ ಇಡೀ ರಾಜ್ಯಕ್ಕೆ ಒಳ್ಳೆಯ ಹೆಸರು ಬರಬೇಕಾದರೆ ಅಬ್ದುಲ್ ಮಜೀದ್ ಅವರನ್ನು ಗೆಲ್ಲಿಸಬೇಕಾಗಿದೆ ಎಂದರು.

ಇದಕ್ಕೂ ಮೊದಲು ಗಿರಿಯಾ ಬೋವಿ ಪಾಳ್ಯದಲ್ಲಿ ಅಬ್ದುಲ್ ಮಜೀದ್ ಪರವಾಗಿ ಮನೆ ಮನೆಗೆ ತೆರಳಿ ಮತ ಯಾಚನೆ ನಡೆಸಿದರು.

ಈ ಸಂದರ್ಭ ಅಭ್ಯರ್ಥಿ ಅಬ್ದುಲ್ ಮಜೀದ್, ನಗರ ಪಾಲಿಕೆ ಸದಸ್ಯ ಸ್ವಾಮಿ, ಪಕ್ಷದ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಪ್ರಮುಖರಾದ ಅಜ್ಜು ಬ್ರದರ್ಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News