ದಾವಣಗೆರೆ: ಬಿಜೆಪಿ ಅಭ್ಯರ್ಥಿ ಮಾಡಾಳ್ ವೀರುಪಾಕ್ಷಪ್ಪ ಮನೆ ಮೇಲೆ ಐಟಿ ದಾಳಿ
Update: 2018-05-08 22:17 IST
ದಾವಣಗೆರೆ,ಮೇ.08: ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವೀರುಪಾಕ್ಷಪ್ಪ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಾಡಾಳ್ ವೀರುಪಾಕ್ಷಪ್ಪ ಅವರ ಚನ್ನೇಶಪು ಗ್ರಾಮದಲ್ಲಿ ಇರುವ ಮನೆಯ ಮೇಲೆ ನಾಲ್ಕು ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳೀಯ ಪೊಲೀಸರೊಂದಿಗೆ ಬಂದ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹಣಕಾಸಿನ ವ್ಯವಹಾರ ಬಗ್ಗೆ ವಿವರಣೆ ನೀಡುವಂತೆ ಮಾಡಾಳ್ ವೀರುಪಾಕ್ಷಪ್ಪ ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.