×
Ad

ಬಾಗೆಪಲ್ಲಿ: ಯಂಗ್ ಇಂಡಿಯಾ ಶಾಲೆಗೆ 8ನೇ ಬಾರಿಗೆ ಶೇ.100 ಫಲಿತಾಂಶ

Update: 2018-05-09 18:10 IST

ಬಾಗೆಪಲ್ಲಿ,ಮೇ.09: ಪಟ್ಟಣದ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತ 8ನೇ ಬಾರಿಗೆ ಶೇ.100ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.

ಪರೀಕ್ಷೆ ಬರೆದ 80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 35 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ 45 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ ಹರಿಣಿ ಶ್ರೀನಿವಾಸ(615), ಎನ್,ಸುಷ್ಮಿತ(614), ಆರ್.ಎಂ.ಶೀರಿಷಾ(611) ಎಸ್.ಇ.ಶ್ರೇಯಸ್ ಕುಮಾರ್‍ರೆಡ್ಡಿ(609)ಪಿ.ವಿ.ನವ್ಯಾ(608) ಜೆ.ಆರ್.ತಾರುಣ್ಯ(608) ಎನ್.ಚರಿತ(607) ಉತ್ಪಾಲಾಮೃತ(604) ಎಂ.ಎಸ್.ರೇವಂತರೆಡ್ಡಿ(602), ಎ.ವಿ.ಗೋಕುಲ್(600) ಸಿ.ಕಾರ್ತಿಕಾ(599), ಟಿ.ಎಸ್.ಅರತಿ(597) ಜಿ.ಎಸ್.ಶೀರಿಷಾರೆಡ್ಡಿ(596) ಪಿ.ಎಲ್.ಚರಣ್(595) ಎಸ್.ಹರಿರ್ಷಿತ(593), ಕೆ.ನೇಹಾ(593) ಡಿ.ಆರ್.ಶೀರಿಷಾ(592), ಜಿ.ದೀಪಾ(589) ಆರ್.ಸ್ನೇಹಲತಾ ನಾಯ್ಡು(597) ಟಿ.ಯಶ್ವವಂತ್(585) ಸೇರಿದಂತೆ ಒಟ್ಟು 35 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಈ ಬಗ್ಗೆ ಶಾಲೆ ಪ್ರಿನ್ಸಿಪಾಲ್ ಜೆ.ಅನಿತಾ ಪ್ರತಿಕ್ರಿಯಿಸಿ ನಮ್ಮ ಶಾಲೆಗೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪರಿಶ್ರಮದಿಂದ 8ನೇ ಬಾರಿಗೆ ಸತತ 100ರಷ್ಟು ಫಲಿತಾಂಶ ಬಂದಿದೆ. ಇಷ್ಟಪಟ್ಟು ಓದಿದ ವಿದ್ಯಾರ್ಥಿಗಳಿಗೂ ಹಾಗೂ ಬೋಧನೆ ಮಾಡಿದ ಶಿಕ್ಷಕರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News