×
Ad

ಹನೂರು: ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ

Update: 2018-05-10 22:09 IST

ಹನೂರು,ಮೇ.10: ಬಹಿರಂಗ ಮತಯಾಚನೆ ಕಡೆಯ ದಿನವಾದ ಇಂದು ಶಾಸಕ ಆರ್ ನರೇಂದ್ರರಾಜುಗೌಡ ಸಮ್ಮುಖದಲ್ಲಿ ಹಲವರು ಜೆಡಿಎಸ್ ಮತ್ತು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಹನೂರು ಕ್ಷೇತ್ರ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮತಯಾಚನೆ ಮಾಡಿ ನಂತರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕೂತ್ತುನೂರು ಗ್ರಾಮದ ವೆಂಕಟೇಶ್, ಮಲ್ಲೇಗೌಡ, ವೆಂಕಟಯ್ಯ, ಗೋವಿಂದರಾಜು, ಮಲ್ಲೇಶ್, ಮಲ್ಲಯ್ಯ, ನಂಜಂಡಯ್ಯ, ಸಾವುಕಯ್ಯ ಹಾಗೂ ಕುರುಟ್ಟಿಹೂಸರು ಗ್ರಾಮದ ಬಸರಾಜು, ಮುರುಗೇಶ್, ಸಣ್ಣಕಾಳಶೆಟ್ಟಿ, ಚಂಡಿಬಸವ, ಮುನಿಮಾದು, ಶಿವು, ಸೇರಿದಂತೆ ಹಲವರು ಬಿಜೆಪಿ, ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದರು.

ನಂತರ ಮಾತನಾಡಿದ ಶಾಸಕ ಆರ್ ನರೇಂದ್ರರಾಜೂಗೌಡ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ  ಬಹಳಷ್ಟು ಅನುದಾನಗಳು ಬಂದಿದ್ದು, ಸಾಕಷ್ಟು ಅಭಿವೃದ್ದಿಗಳಾಗಿವೆ. ರಾಜ್ಯ ಸರ್ಕಾರ ಬಡವರ ಪರವಿದ್ದು, ಪ್ರತಿಯೊಂದು ಸಮುದಾಯದ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದೆ. ಮುಂದಿನ ಐದು ವರ್ಷಗಳಲ್ಲೂ ಸಹ ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದ್ದು, ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಹೆಚ್ಚಿನ ಹಲವು ಜನಪರ ಯೋಜನೆಗಳನ್ನು ತಂದು ಸರ್ವಜನರ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಲಾಗುವುದು. ಆದ್ದರಿಂದ ಶನಿವಾರ ನಡೆಯುವ ಮತದಾನದ ದಿನದಂದು ತಪ್ಪದೇ ಕಾಂಗ್ರೆಸ್ ಅಭ್ಯರ್ಥಿಯಾದ ನನಗೆ ಮತ ನೀಡಬೇಬೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಚಿಕ್ಕತಮ್ಮಯ್ಯಗೌಡ, ಜಯಪ್ರಕಾಶ್‍ಗುಪ್ತ ಗಿರೀಶ್, ಆನಂದ್, ಗೋವಿಂದಗೌಡ, ಕೃಷ್ಣ , ನಟರಾಜು, ಸೋಮ್ಮಣ್ಣ , ರಾಜೇಶ್ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News