ಮದ್ದೂರು: ಹಾವು ಕಡಿದು ಮಹಿಳಾ ಪೇದೆ ಮೃತ್ಯು
Update: 2018-05-10 22:50 IST
ಮದ್ದೂರು, ಮೇ 10: ನಾಗರಹಾವು ಕಚ್ಚಿ ಮಹಿಳಾ ಪೇದೆ ಮೃತಪಟ್ಟಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಸಂಚಾರಿ ಪೊಲೀಸ್ ಠಾಣೆ ಪೇದೆ ಯಶೋಧ(35) ಮೃತಪಟ್ಟವರು.
ಮನೆಯಲ್ಲಿ ಹಾವು ಕಚ್ಚಿ ಅಸ್ವಸ್ಥಗೊಂಡ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯಶೋಧ ಅವರ ಪತಿ ರಾಮಚಂದ್ರ ಅವರು ಪಟ್ಟಣ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.