×
Ad

ಹರಪನಹಳ್ಳಿ: ಕಾಂಗ್ರೆಸ್ ಅಭ್ಯರ್ಥಿ ಪರ ನಟ ಶ್ರೀನಗರ ಕಿಟ್ಟಿ ರೋಡ್ ಶೋ

Update: 2018-05-10 23:25 IST

ಹರಪನಹಳ್ಳಿ,ಮೇ.10: ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಪಿ.ರವೀಂದ್ರ ಪರ ಚಲನಚಿತ್ರ ನಟ ಶ್ರೀನಗರ ಕಿಟ್ಟಿ ರೋಡ್ ಶೋ ನಡೆಸಿದರು. 

ಪಟ್ಟಣದ ಹಿರೆಕೆರೆ ವೃತ್ತದಿಂದ ತೆರೆದ ವಾಹನದಲ್ಲಿ ಅಭ್ಯರ್ಥಿ ಎಂ.ಪಿ.ರವೀಂದ್ರ ಅವರ ಜೊತೆಗೂಡಿ ಕಾರ್ಯಕರ್ತರು, ಅಭಿಮಾನಿಗಳತ್ತಾ ಕೈ ಬಿಸುತ್ತಾ ಹುರಿದುಂಬಿಸಿದರು. ವಾಲ್ಮೀಕಿ ನಗರ, ಕಳ್ಳಿಬಾವಿಹಳ್ಳಿ, ಮೇಗಳಪೇಟೆ, ಪುರಸಭೆ ಸರ್ಕಲ್, ತಾಯಮ್ಮನ ಹುಣಸೇಮರ, ಹಳೇ ಬಸ್ ನಿಲ್ದಾಣ, ಬಾಣಗೆರೆ, ಕೊಟ್ಟೂರು ರಸ್ತೆ, ಐಬಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಮೆರವಣಿಗೆ ಅಂತ್ಯಗೊಂಡಿತು. ನೆಚ್ಚಿನ ನಟರನ್ನು ನೋಡಲು ಜನರ ನೂಕುನುಗ್ಗಲು ಉಂಟಾಯಿತು. 

ನಟ ಶ್ರೀನಗರಕಿಟ್ಟಿ ಮಾತನಾಡಿ, ಹಣ, ಹೆಂಡಕ್ಕೆ ಮತವನ್ನು ಮಾರಿಕೊಳ್ಳಬೇಡಿ. ಒಂದು ದಿನ ಕೊಡುವ 500ರೂ ನೋಟು 5 ವರ್ಷ ಪರಿತಪಪಿಸುವಂತೆ ಮಾಡುತ್ತಿದೆ. ಅದ್ದರಿಂದ ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಕ್ಷೇತ್ರದಲ್ಲಿ ಶಾಶ್ಚತ ಅಭಿವೃದ್ದಿ ಕಾರ್ಯಗಳನ್ನು ಮಾಡಿರುವ ಎಂ.ಪಿ.ರವೀಂದ್ರ ಅವರಿಗೆ ಮತ ನೀಡಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು. 

ಕಾರ್ಯಕರ್ತರು ಅಭ್ಯರ್ಥಿ ಎಂ.ಪಿ.ರವೀಂದ್ರ ಹಾಗೂ ನಟ ಶ್ರೀನಗರ ಕಿಟ್ಟಿ ಪರ ಘೋಷಣೆ ಕೂಗಿದರು. ಮೆರವಣಿಗೆಯಲ್ಲಿ ಕೇಂದ್ರ ಮಾಜಿ ಸಚಿವ ಶೀಲಂ, ಎಂ.ವಿ.ಅಂಜಿನಪ್ಪ, ಶಶಿಧರ್ ಪೂಜಾರ್, ಪುರಸಭೆ ಸದಸ್ಯ ಅರುಣ್ ಪೂಜಾರ್, ಇರ್ಫಾನ್, ಸಿದ್ದೀಕ್, ಜಾಖಿರ್ ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News