ಮೈಸೂರು: ಕೆ.ಆರ್.ಆಸ್ಪತ್ರೆ ಬಳಿ ಯುವಕನ ಹತ್ಯೆ
Update: 2018-05-11 21:50 IST
ಮೈಸೂರು,ಮೇ.11: ಮೈಸೂರಿನ ಕೆ.ಆರ್ ಆಸ್ಪತ್ರೆ ಬಳಿ ದುಷ್ಕರ್ಮಿಗಳು ಯುವಕನನ್ನು ಕೊಲೆಗೈದಿರುವ ಘಟನೆ ನಡೆದಿದೆ.
ಮೊಹಮ್ಮದ್ ಇರ್ಫಾನ್(25) ಮೃತಪಟ್ಟ ಯುವಕನಾಗಿದ್ದು, ಆತ ಗೂಡ್ಸ್ ಆಟೋ ಡ್ರೈವರ್ ಆಗಿದ್ದ. ಸುಭಾಷ್ ನಗರದ ನಿವಾಸಿ ಮಹಮದ್ ಫೈರೋಝ್ ಅವರ ಮಗನಾಗಿದ್ದು, ಆತನನ್ನು ಕೆ. ಆರ್ ಆಸ್ಪತ್ರೆ ಬಳಿಯ ಇಂದಿರಾ ಕ್ಯಾಂಟಿನ್ ಬಳಿ ಕೈಕಾಲು ಕಟ್ಟಿ ಹೊಡೆದು ಕೊಲೆ ಮಾಡಲಾಗಿದೆ.
ಸಾರ್ವಜನಿಕರು ಬೆಳಗ್ಗೆ ಮೃತ ದೇಹವನ್ನು ಕಂಡು ಪೊಲಿಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ದೇವರಾಜ ಠಾಣಾ ಪೊಲಿಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.