×
Ad

ಮಡಿಕೇರಿ: 27 ನೇ ಬಾರಿಯ ಚುನಾವಣೆಯಲ್ಲೂ ಮೊದಲ ಮತದಾರರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ

Update: 2018-05-12 16:54 IST

ಮಡಿಕೇರಿ,ಮೇ.12: ಮಡಿಕೇರಿಯ ಸಂತ ಮೈಕಲರ ಶಾಲಾ ಮತಗಟ್ಟೆಯಲ್ಲಿ ತನ್ನ 27 ನೇ ಚುನಾವಣೆಯಲ್ಲೂ ಮೊದಲ ಮತದಾರರಾಗಿ ಹಿರಿಯ ರಾಜಕಾರಣಿ, ಕೆಪಿಸಿಸಿಯ ಹಿರಿಯ ಉಪಾಧ್ಯಕ್ಷರಾದ ಬೊಟ್ಟೋಳಂಡ ಮಿಟ್ಟು ಚಂಗಪ್ಪ ಮತ ಚಲಾಯಿಸಿದರು.

27 ಚುನಾವಣೆಗಳಲ್ಲಿಯೂ ಮಿಟ್ಟು ಚಂಗಪ್ಪ ಮತದಾನ ಕೇಂದ್ರದಲ್ಲಿ ಮೊದಲ ಮತದಾರರಾಗಿ ಹಕ್ಕು ಚಲಾಯಿಸಿರುವುದು ವಿಶೇಷ.
ಮತದಾನ ಹಬ್ಬದಂತೆ, ಈ ಉತ್ಸವವನ್ನು ಮತದಾರರಾಗಿ  ಸಂಭ್ರಮಿಸಬೇಕು ಎಂಬ ಹಿನ್ನಲೆಯಲ್ಲಿ  ಬೆಳಗ್ಗೆ 6.40 ಗಂಟೆಗೆ ನಗರದ ಸಂತಮೈಕಲರ ಶಾಲಾ ಮತಗಟ್ಟೆಗೆ ಪತ್ನಿ ಯಶಿ ಚಂಗಪ್ಪ ಅವರೊಂದಿಗೆ ಬಂದು ಸಾಲಿನಲ್ಲಿ ಮೊದಲಿಗರಾಗಿ ನಿಂತುಕೊಂಡ ಮಿಟ್ಟು ಚಂಗಪ್ಪ ಮತದಾನ ಪ್ರಕ್ರಿಯೆ ಪ್ರಾರಂಭವಾಗುತ್ತಿರುವಂತೆಯೇ ಮೊದಲು ತಮ್ಮ ಮತ ಹಾಕಿದರು.

ಮತಗಟ್ಟೆಯಲ್ಲಿ ಮೊದಲ ಮತದಾರನಾಗಿ ಸತತ 27 ಚುನಾವಣೆಗಳಲ್ಲಿಯೂ ಮತ ಹಾಕುತ್ತಿರುವುದು ಮನಸ್ಸಿಗೆ ಖುಷಿಕೊಟ್ಟಿದೆ. ಇಂದಿನ ದಿನಗಳಲ್ಲಿ ಅನೇಕರಿಗೆ ಮತದಾನ ಎಂದರೆ ಜಿಗುಪ್ಸೆಯಿದೆ. ಆದರೆ ಮತದಾನ ಅತ್ಯಂತ ಮುಖ್ಯವಾದದ್ದು. ಹೀಗಾಗಿ ನಾನು ಹಿರಿಯ ನಾಗರಿಕನಾಗಿಯೇ ಮತದಾನದ ಬಗ್ಗೆ ಇಷ್ಟೊಂದು ಆಸಕ್ತನಾಗಿರುವಾಗ ಯುವಕ, ಯುವತಿಯರು ಮತದಾನದ ಮೂಲಕ ಮಹತ್ವದ ಕ್ಷಣವನ್ನು ಸಂಭ್ರಮಿಸಬೇಕು ಎಂದು ಮಿಟ್ಟು ಚಂಗಪ್ಪ ಅಭಿಪ್ರಾಯಪಟ್ಟರು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News