ಮತದಾನೋತ್ತರ ಸಮೀಕ್ಷೆಗಳಲ್ಲಿ ಮೇಲುಗೈ ಯಾವ ಪಕ್ಷದ್ದು ಗೊತ್ತಾ ?

Update: 2018-05-12 13:42 GMT

ಬೆಂಗಳೂರು, ಮೇ 12: ರಾಜ್ಯ ವಿಧಾನಸಭೆಯ 222 ಸ್ಥಾನಗಳಿಗೆ ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರಮುಖ ಪ್ರತಿಪಕ್ಷ ಬಿಜೆಪಿ ನಡುವೆ ಸಮಬಲದ ಫಲಿತಾಂಶ ಹೊರಬೀಳಲಿದ್ದು, ಜೆಡಿಎಸ್ ನಿರ್ಣಾಯಕವಾಗಲಿವೆ ಎಂದು ವಿವಿಧ ಮಾಧ್ಯಮಗಳು ನಡೆಸಿರುವ ಮತದಾನೋತ್ತರ ಸಮೀಕ್ಷೆಯಿಂದ ತಿಳಿದು ಬಂದಿದೆ.

ಇಂಡಿಯಾ ಟುಡೆ ಗ್ರೂಪ್, ಆ್ಯಕ್ಸಿಸ್ ಇಂಡಿಯಾ: ಕಾಂಗ್ರೆಸ್ 106-118, ಬಿಜೆಪಿ 79-92, ಜೆಡಿಎಸ್ 22-30, ಇತರೆ 1-04.

ಟೈಮ್ಸ್ ನೌ ಹಾಗೂ ವಿಎಂಆರ್: ಕಾಂಗ್ರೆಸ್ 90-103, ಬಿಜೆಪಿ 80-93, ಜೆಡಿಎಸ್ 31-39, ಇತರೆ 2-4.

ಜನ್ ಕಿ ಬಾತ್, ರಿಪಬ್ಲಿಕ್: ಕಾಂಗ್ರೆಸ್ 73-82, ಬಿಜೆಪಿ 95-114, ಜೆಡಿಎಸ್ 32-43, ಇತರೆ 2-3.

ನ್ಯೂಸ್ ಎಕ್ಸ್ ಹಾಗೂ ಸಿಎನ್‌ಎಕ್ಸ್: ಕಾಂಗ್ರೆಸ್ 72-78, ಬಿಜೆಪಿ 102-110, ಜೆಡಿಎಸ್ 35-39, ಇತರೆ 3-5.

ಎಬಿಪಿ ಮತ್ತು ಸಿ ವೋಟರ್: ಬಿಜೆಪಿ 97-109, ಕಾಂಗ್ರೆಸ್ 87-99, ಜೆಡಿಎಸ್ 21-30 ಹಾಗೂ ಪಕ್ಷೇತರ 1-8.

ಇಂಡಿಯಾ ಟಿವಿ ಹಾಗೂ ವಿಎಂಆರ್: ಕಾಂಗ್ರೆಸ್ 97, ಬಿಜೆಪಿ 87, ಜೆಡಿಎಸ್ 35 ಹಾಗೂ ಇತರೆ 3.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News