×
Ad

ತುಮಕೂರಿನಲ್ಲಿ ಇಂದು ಬಿಡುಗಡೆಗೊಂಡ ಮತದಾನದ ಶೇಕಡಾವಾರು ಪಟ್ಟಿ

Update: 2018-05-13 09:56 IST

ತುಮಕೂರು, ಮೇ 13: ರಾಜ್ಯಾದ್ಯಂತ ಶನಿವಾರ ನಡೆದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ತುಮಕೂರು ಜಿಲ್ಲೆಯಲ್ಲಿ ಮತದಾನದ ಅಂಕಿಅಂಶ ಬಿಡುಗಡೆಗೆ ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಮತದಾನದ ಅಂತಿಮ ಶೇಕಡವಾರು ಪಟ್ಟಿಯನ್ನು ಇಂದು ಬೆಳಗ್ಗೆ ಬಿಡುಗಡೆ ಮಾಡಲಾಗಿದೆ.

ತುಮಕೂರು ಜಿಲ್ಲೆಯಾದ್ಯಂತ 82.52% ಮತದಾನವಾಗಿದ್ದು, ಇದು ಕಳೆದ ಸಾಲಿಗಿಂತ 14 ಶೇ. ಹೆಚ್ಚಳವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 68% ಮತದಾನವಾಗಿತ್ತು. ಈ ಬಾರಿ ಹಕ್ಕು ಚಲಾವಣೆಯಲ್ಲಿ ಗ್ರಾಮೀಣ ಭಾಗದವರೇ ಮುಂದಿದ್ದರೆ, ತುಮಕೂರು ನಗರ ಮತದಾನದಲ್ಲಿ ಕಟ್ಟಕಡೆಯ ಸ್ಥಾನದಲ್ಲಿದೆ.

11 ವಿಧಾನಸಭಾ ಕ್ಷೇತ್ರಗಳ ಸಂಪೂರ್ಣ ಮತದಾನದ ವಿವರ ಇಂತಿವೆ

* ತುಮಕೂರು ನಗರ : 65.02%

* ತುಮಕೂರು ಗ್ರಾಮಾಂತರ: 85.01%.

*ಕೊರಟಗೆರೆ: 84.12%

*ಗುಬ್ಬಿ:84.54%.

*ಸಿರಾ: 84.56%

*ಪಾವಗಡ: 82.32%

*ಮಧುಗಿರಿ: 85.51%

*ಚಿಕ್ಕನಾಯಕನಹಳ್ಳಿ: 84.26%

*ತಿಪಟೂರು: 83.20%.

*ತುರುವೆಕೆರೆ: 84.43%

*ಕುಣಿಗಲ್: 84.79%

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News