ಶಿವಮೊಗ್ಗದಲ್ಲಿ ಶೇ.78.08 ರಷ್ಟು ಮತದಾನ: ತೀರ್ಥಹಳ್ಳಿ, ಸೊರಬ ಕ್ಷೇತ್ರಗಳಲ್ಲಿ ಅತ್ಯಧಿಕ

Update: 2018-05-13 13:22 GMT

ಶಿವಮೊಗ್ಗ, ಮೇ 13: ವಿಧಾನಸಭೆ ಚುನಾವಣೆಗೆ ಶನಿವಾರ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ನಡೆದ ಮತದಾನದ ಅಧಿಕೃತ ವಿವರಗಳು ಲಭ್ಯವಾಗಿದ್ದು, ಜಿಲ್ಲೆಯಲ್ಲಿ ಶೇ. 78.08 ರಷ್ಟು ಮತದಾನವಾಗಿದೆ. ತೀರ್ಥಹಳ್ಳಿ ಮತ್ತು ಸೊರಬ ಕ್ಷೇತ್ರಗಳಲ್ಲಿ ಅತ್ಯಧಿಕ ಹಾಗೂ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಕಡಿಮೆ ಮತದಾನವಾಗಿದೆ. 

ಜಿಲ್ಲೆಯಲ್ಲಿ ಒಟ್ಟಾರೆ 14,26,208 ಮತದಾರರಿದ್ದು, 11,13,546 ಜನರು ಮತ ಹಾಕಿದ್ದಾರೆ. ಒಟ್ಟು ಮತದಾರರಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದ್ದಾರೆ. ಆದರೆ ಮತದಾನದಲ್ಲಿ ಮಹಿಳೆಯರಿಗಿಂತ ಪುರುಷರು ಮುಂದಿರುವುದು ಕಂಡುಬರುತ್ತದೆ. 

ಒಟ್ಟು 7,11,732 ಪುರುಷ ಮತದಾರರಲ್ಲಿ 5,62,978 (ಶೇ. 79.10) ಜನರು ಮತ ಹಾಕಿದ್ದಾರೆ. 7,14,418 ಮಹಿಳಾ ಮತದಾರರಲ್ಲಿ 5,50,565 (ಶೇ. 77.06) ಜನರು ಮತದಾನ ಮಾಡಿದ್ದಾರೆ. ಉಳಿದಂತೆ ಜಿಲ್ಲೆಯಲ್ಲಿ ಇತರೆ ವರ್ಗಕ್ಕೆ ಸೇರಿದ 58 ಮತದಾರರಿದ್ದು, ಇದರಲ್ಲಿ ಮತ ಹಾಕಿದವರ ಸಂಖ್ಯೆ ಕೇವಲ 3 ಜನರು ಮಾತ್ರವಾಗಿದೆ.

ಕ್ಷೇತ್ರವಾರು ವಿವರ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,11,513 ಇದ್ದು 1,71,482 (ಪುರುಷ : ಶೇ. 82.96, ಮಹಿಳೆ : 79.19) ಶೇ. 81.07 ರಷ್ಟು ಮತದಾನವಾಗಿದೆ. ಉಳಿದಂತೆ ಭದ್ರಾವತಿಯಲ್ಲಿ 2,07,624 ಮತದಾರರಿದ್ದು 1,51,833 ಮತದಾರರು ಮತ ಹಾಕಿದ್ದಾರೆ (ಪುರುಷ : ಶೇ. 73.75, ಮಹಿಳೆ : 72.53) ಶೇ. 73.13 ಮತದಾನವಾಗಿದೆ.

ಶಿವಮೊಗ್ಗ ನಗರದಲ್ಲಿ 2,56,361 ಮತದಾರರಿದ್ದು 1,70,692 ಜನರು ಮತ ಹಾಕಿದ್ಧಾರೆ (ಪುರುಷ : ಶೇ. 67.67, ಮಹಿಳೆ : ಶೇ. 65.53) ಶೇ. 66.58, ತೀರ್ಥಹಳ್ಳಿ 1,84,122 ಮತದಾರರಲ್ಲಿ 1,56,189 ಜನರು ಮತ ಹಾಕಿದ್ದಾರೆ (ಪುರುಷ : ಶೇ. 85.43, ಮಹಿಳೆ : ಶೇ. 84.23) ಶೇ. 84.83 ಮತದಾನವಾಗಿದೆ.  

ಶಿಕಾರಿಪುರದಲ್ಲಿ 1,88,206 ಮತದಾರರಿದ್ದು 1,53,663 ಜನರು ಮತ ಹಾಕಿದ್ದಾರೆ (ಪುರುಷ: ಶೇ. 82.51, ಮಹಿಳೆ: ಶೇ. 80.77) ಶೇ. 81.65 ಮತದಾನವಾಗಿದೆ. ಸೊರಬದಲ್ಲಿ 1,84,585 ಮತದಾರರಿದ್ದು 1,55,916 ಜನರು ಮತ ಹಾಕಿದ್ದು (ಪುರುಷ : 84.88, ಮಹಿಳೆ : ಶೇ. 84.05) ಶೇ. 84.47ಮತದಾನವಾಗಿದೆ. ಸಾಗರ ಕ್ಷೇತ್ರದಲ್ಲಿ ಒಟ್ಟಾರೆ 1,93,797 ಮತದಾರರಿದ್ದು 1,53,771 ಜನರು ಮತ ಹಾಕಿದ್ದಾರೆ (ಪುರುಷ : ಶೇ. 80.51, ಮಹಿಳೆ : 78.19) ಶೇ. 79.35 ರಷ್ಟು ಮತದಾನವಾಗಿದೆ. 

ನಿರಾಸಕ್ತಿ: ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ತೀರ್ಥಹಳ್ಳಿ ಹೊರತುಪಡಿಸಿ ಉಳಿದ ಆರು ಕ್ಷೇತ್ರಗಳಲ್ಲಿ ಇತರೆ ವರ್ಗಕ್ಕೆ ಸೇರಿದ 58 ಮತದಾರರಿದ್ದಾರೆ. ಆದರೆ ಮತ ಹಾಕಿದವರ ಸಂಖ್ಯೆ ಕೇವಲ ಮೂರು ಮಾತ್ರವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 7 ಜನರಿದ್ದು, ಮತ ಹಾಕಿದವರ ಸಂಖ್ಯೆ 0 ಆಗಿದೆ. ಉಳಿದಂತೆ ಭದ್ರಾವತಿಯಲ್ಲಿ 2 ರಲ್ಲಿ 1, ಶಿವಮೊಗ್ಗ ನಗರದಲ್ಲಿ 20 ಜನರಲ್ಲಿ 1, ಶಿಕಾರಿಪುರದಲ್ಲಿ 15 ಜನರಲ್ಲಿ ಓರ್ವರೂ ಮತ ಹಾಕಿಲ್ಲ. ಸೊರಬದಲ್ಲಿ 12 ಜನರಲ್ಲಿ 1, ಸಾಗರದಲ್ಲಿ ಇಬ್ಬರು ಮತದಾರರಿದ್ದು ಓಬ್ಬರೂ ಮತ ಹಾಕಿಲ್ಲ. 

2013 ರ ವಿವರ: 2013 ರ ವಿಧಾನಸಭೆ ಚುನಾವಣೆಯ ಕ್ಷೇತ್ರವಾರು ಮತದಾನದ ವಿವರ ಈ ಮುಂದಿನಂತಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,42,858, ಭದ್ರಾವತಿಯಲ್ಲಿ 1,42,630, ಶಿವಮೊಗ್ಗದಲ್ಲಿ 1,38,482, ತೀರ್ಥಹಳ್ಳಿ 1,38,882, ಶಿಕಾರಿಪುರ 1,37,845, ಸೊರಬದಲ್ಲಿ 1,40,434 ಹಾಗೂ ಸಾಗರದಲ್ಲಿ 1,36,274 ಮತದಾರರು ಮತ ಹಾಕಿದ್ದಾರೆ. ಒಟ್ಟಾರೆ 2013 ರ ಚುನಾವಣೆಯ ಮತದಾರರ ಪಟ್ಟಿಯಲ್ಲಿ 12,94,989 ಮತದಾರರಿದ್ದು ಇದರಲ್ಲಿ 9,77,405 ಜನರು ಮತದಾನ ಮಾಡಿದ್ದರು. 

ಮತಯಂತ್ರ ದಾಸ್ತಾನು : ಬಿಗಿ ಪೊಲೀಸ್ ಪಹರೆ
ಶಿವಮೊಗ್ಗ ನಗರದ ಸಹ್ಯಾದ್ರಿ ಕಾಲೇಜು ಕಟ್ಟಡದಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿನ ಸ್ಟ್ರಾಂಗ್ ರೂಂನಲ್ಲಿಡಲಾಗಿದೆ. ಭಾನುವಾರ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮತಯಂತ್ರಗಳ ಕೊಠಡಿಗೆ ಬೀಗ ಹಾಕಿ ಸೀಲ್ ಹಾಕಲಾಯಿತು. ಕಟ್ಟಡದ ಸುತ್ತಮುತ್ತ ಬಿಗಿ ಪೊಲೀಸ್ ಪಹರೆಯ ವ್ಯವಸ್ಥೆ ಮಾಡಲಾಗಿದೆ. ಸಿ. ಸಿ. ಕ್ಯಾಮರಾ ಕೂಡ ಅಳವಡಿಕೆ ಮಾಡಲಾಗಿದೆ. ಕಾಲೇಜು ಆವರಣದಲ್ಲಿ ಸಾರ್ವಜನಿಕರ ಪ್ರವೇಶದ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಕಟ್ಟಡದ ಕೆಳ ನೆಲ ಮಹಡಿ ಹಾಲ್‍ನ 2 ಮತ್ತು 3 ರ ಕೊಠಡಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮತ ಎಣಿಕೆ ನಡೆಯಲಿದೆ. ಉಳಿದಂತೆ ನೆಲ ಮಹಡಿಯ ಹಾಲ್ ನಂ. 16 ಮತ್ತು 17 ರಲ್ಲಿ ಭದ್ರಾವತಿ ಕ್ಷೇತ್ರ, ನೆಲ ಮಹಡಿಯ ಹಾಲ್ ನಂ. 12 ಮತ್ತು 13 ರಲ್ಲಿ ಶಿವಮೊಗ್ಗ, ನೆಲ ಮಹಡಿಯ ಹಾಲ್ ನಂ. 8 ಮತ್ತು 9 ರಲ್ಲಿ ತೀರ್ಥಹಳ್ಳಿ, ಒಂದನೇ ಮಹಡಿಯ ಹಾಲ್ ನಂ. 28 ಮತ್ತು 29 ರಲ್ಲಿ ಸೊರಬ ಹಾಗೂ ಒಂದನೇ ಮಹಡಿಯ ಹಾಲ್ ನಂ. 25 ಮತ್ತು 26 ರಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯಲಿದೆ. 

ಪ್ರತಿ ಕ್ಷೇತ್ರಕ್ಕೆ ಎರಡು ಹಾಲ್‍ಗಳನ್ನು ಮತ ಎಣಿಕೆ ಕಾರ್ಯಕ್ಕೆ ಸಜ್ಜುಗೊಳಿಸಲಾಗಿದೆ. ಹಾಗೆಯೇ ತಲಾ 14 ಟೇಬಲ್‍ಗಳು, ತಲಾ 28 ಮತ ಎಣಿಕೆ ಅಧಿಕಾರಿ ಹಾಗೂ 14 ಎಣಿಕೆ ಸಹಾಯಕರನ್ನು ನೇಮಿಸಲಾಗುತ್ತಿದೆ. ಒಟ್ಟಾರೆ ಏಳು ಕ್ಷೇತ್ರಗಳ ಮತ ಎಣಿಕೆಗೆ 14 ಹಾಲ್‍ಗಳನ್ನು ಸಜ್ಜುಗೊಳಿಸಲಾಗಿದ್ದು, 98 ಟೇಬಲ್‍ಗಳನ್ನು ಹಾಕಲಾಗಿದೆ. 196 ಮತ ಎಣಿಕೆ ಅಧಿಕಾರಿ ಹಾಗೂ 98 ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. 

ಶೇಕಡವಾರು ಮತದಾನದ ವಿವರ-2018 
ಶಿವಮೊಗ್ಗ ಗ್ರಾ. - ಶೇ.81.07
ಭದ್ರಾವತಿ - ಶೇ.73.13
ಶಿವಮೊಗ್ಗ - ಶೇ.66.58
ತೀರ್ಥಹಳ್ಳಿ - ಶೇ.84.83
ಶಿಕಾರಿಪುರ - ಶೇ.81.65
ಸೊರಬ - ಶೇ.84.47
ಸಾಗರ - ಶೇ.79.35

ಒಟ್ಟು ಶೇ. 78.08 

ಶೇಕಡವಾರು ಮತದಾನದ ವಿವರ-2013 
ಶಿವಮೊಗ್ಗ ಗ್ರಾ. - ಶೇ.76.83
ಭದ್ರಾವತಿ - ಶೇ.71.64
ಶಿವಮೊಗ್ಗ - ಶೇ.64.16
ತೀರ್ಥಹಳ್ಳಿ - ಶೇ.81.83
ಶಿಕಾರಿಪುರ - ಶೇ.79.82
ಸೊರಬ - ಶೇ.81.65
ಸಾಗರ - ಶೇ.75.84

ಒಟ್ಟು ಶೇ. 78.48 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News