ಕರ್ನಾಟಕದಲ್ಲಿ ವಿದ್ಯುತ್‌, ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆ

Update: 2018-05-14 07:06 GMT

ಬೆಂಗಳೂರು, ಮೇ 14: ಕರ್ನಾಟಕಲ್ಲಿ ವಿಧಾನಸಭೆಗೆ   ಚುನಾವಣೆ ಮುಗಿದು  ಫಲಿತಾಂಶದ ನಿರೀಕ್ಷೆಯಲ್ಲಿರುವ ಜನತೆಗೆ  ವಿದ್ಯುತ್ ದರ , ಪೆಟ್ರೋಲ್, ಡಿಸೇಲ್ ದರ ಏರಿಕೆಯ ಆಘಾತ ಉಂಟಾಗಿದೆ.

ಪೆಟ್ರೋಲ್‌ಗೆ ಪ್ರತಿ ಲೀಟರ್‌ಗೆ 17 ಪೈಸೆ ಹಾಗೂ ಡೀಸಲ್‌ಗೆ ಪ್ರತಿ ಲೀಟರ್‌ನಲ್ಲಿ 21 ಪೈಸೆಯಷ್ಟು ಹೆಚ್ಚಳವಾಗಿದೆ. ಇದೇ ವೇಳೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ರಾಜ್ಯದ ಜನತೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ.

ವಿದ್ಯುತ್‌ ದರ ಏರಿಕೆಯ ವಿವರವನ್ನು  ಕೆಇಆರ್‌ಸಿ ಅಧ್ಯಕ್ಷ, ಎಂ.ಕೆ. ಶಂಕರಲಿಂಗೇಗೌಡ ಅವರು ಸೋಮವಾರ  ಪ್ರಕಟಿಸಿದರು.  ರಾಜ್ಯದ 5 ವಿದ್ಯುತ್‌ ಪ್ರಸರಣ ನಿಗಮದಲ್ಲಿ ಪ್ರತಿ ಯೂನಿಟ್‌ಗೆ 82ರಿಂದ 1.62 ರೂನಷ್ಟು  ವಿದ್ಯುತ್ ಏರಿಕೆಯಾಗಿದೆ.

 ಪರಿಷ್ಕೃತ ವಿದ್ಯುತ್‌ ದರ ಎಪ್ರಿಲ್‌ 1 ರಿಂದ ಪೂರ್ವಾನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು. 5 ವಿದ್ಯುತ್‌ ಪ್ರಸರಣ ನಿಗಮದಲ್ಲಿ ಏರಿಕೆಯಾಗಿರುವ ವಿದ್ಯುತ್ ದರ  ವಿವರ ಇಂತಿವೆ.

*ಬೆಸ್ಕಾಂ: 82ಪೈಸೆ(ಶೇ.13)

* ಮೆಸ್ಕಾಂ:1.23 ರೂ. (ಶೇ.19)

* ಸೆಸ್ಕ್‌: 1.13ರೂ (ಶೇ.18)

* ಹೆಸ್ಕಾಂ: 1.23 ರೂ. (ಶೇ.19)

* ಜೆಸ್ಕಾಂ:  1.62 ರೂ(ಶೇ.26)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News