ಹಾಸನ: ಕಲ್ಲಿನಿಂದ ಹೊಡೆದು ಯುವಕನ ಹತ್ಯೆ
Update: 2018-05-14 14:51 IST
ಹಾಸನ, ಮೇ 14: ನಗರದ ಸಂತೇಪೇಟೆ ಬಳಿ ಸಂತೇಮಳದಲ್ಲಿ ಯುವಕನೋರ್ವನ ಬರ್ಬರ ಹತ್ಯೆಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ನಗರದ ಸಮೀಪ ವಾಸವಾಗಿದ್ದ ಕಾಟೀಹಳ್ಳಿ ನಿವಾಸಿ ಮಧು (35) ಮೃತರು ಎಂದು ಗುರುತಿಸಲಾಗಿದೆ.
ರವಿವಾರ ರಾತ್ರಿ ಘಟನೆ ಸಂಭವಿಸಿದ್ದು, ಬಿಯರ್ ಬಾಟಲ್ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಈ ಕೃತ್ಯ ಎಸಗಲಾಗಿದೆ. ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ಉಂಟಾದ ಧ್ವೇಷ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದಾರೆ.
ರವಿವಾರ ರಾತ್ರಿ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.