×
Ad

ಗಮನ ಸೆಳೆದ ಗಣ್ಯರ ಕ್ಷೇತ್ರಗಳ ಫಲಿತಾಂಶ: ಶಿವಮೊಗ್ಗ

Update: 2018-05-15 20:11 IST

ಶಿವಮೊಗ್ಗ,ಮೇ.15: ರಾಜ್ಯ ವಿಧಾನಸಭಾ ಚುನಾವಣೆಯ ಶಿವಮೊಗ್ಗ ಕ್ಷೇತ್ರದ ಸ್ಪರ್ಧೆಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ 104027 ಮತಗಳನ್ನು ಪಡೆದು ಕಾಂಗ್ರೆಸ್ ನ ಕೆ.ಬಿ ಪ್ರಸನ್ನ ಕುಮಾರ್ ವಿರುದ್ಧ ಜಯಗಳಿಸಿದ್ದಾರೆ.

2013 ರ ವಿಧಾನಸಭಾ ಚುನಾವಣೆಯಲ್ಲಿ ತನ್ನೆದುರು ಜಯಗಳಿಸಿದ್ದ ಕಾಂಗ್ರೆಸ್ ನ ಪ್ರಸನ್ನ ಕುಮಾರ್ (57920 ಮತ) ವಿರುದ್ಧ 46,107 ಮತಗಳ ಭಾರೀ ಮತಗಳ ಅಂತರದಲ್ಲಿ ಜಯಗಳಿಸಿ ಕಳೆದ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News