×
Ad

ಹನೂರು: ಟೌನ್ ಯೂತ್‍ ಕಾಂಗ್ರೆಸ್ ನಿಂದ ಶಾಸಕರಿಗೆ ಅಭಿನಂಧನೆ

Update: 2018-05-16 16:40 IST

ಹನೂರು,ಮೇ.16: ಶಾಸಕ ನರೇಂದ್ರರಾಜೂಗೌಡ ವಿಧಾನಸಭೆಯ ಚುನಾವಣೆಯಲ್ಲಿ ಸತತ ಮೂರು ಭಾರಿ ಗೆದ್ದ ಹಿನ್ನಲೆಯಲ್ಲಿ ಹನೂರು ಟೌನ್ ಯೂತ್‍ ಕಾಂಗ್ರೇಸ್ ಅಧ್ಯಕ್ಷ ಸತೀಶ್ ಶಾಸಕರಿಗೆ ಪಟ್ಟಣದ ಯುವ ಸಮೂಹದ ಪರವಾಗಿ ಹೂವಿನ ಹಾರ ಹಾಕಿ ಹೃತ್ಪೂರ್ವಕವಾಗಿ ಅಭಿನಂಧಿಸಿದರು.

ಅಭಿನಂದನೆ ಸ್ವೀಕರಿಸಿ ನಂತರ ಮಾತನಾಡಿದ ಶಾಸಕ ನರೇಂದ್ರ, ಹನೂರು ಕ್ಷೇತ್ರದಲ್ಲಿ ನನ್ನ ಗೆಲುವು ಜನಬಲದಿಂದ ಒಲಿದಿದ್ದು, ಹಣ ಬಲಕ್ಕೆ ಕ್ಷೇತ್ರದಲ್ಲಿ ಬೆಲೆಯಿಲ್ಲ ಎಂಬುದನ್ನು ಕಾರ್ಯಕರ್ತರು ಈ ಜಯದ ಮೂಲಕ ಸಾಬೀತು ಮಾಡಿದ್ದಾರೆ. ಕಳೆದ ಭಾರಿಯ ಅಭಿವೃದ್ದಿ ಕಾರ್ಯಗಳೇ ನನಗೆ ಶ್ರೀರಕ್ಷೆಯಾಗಿದ್ದು, ಕ್ಷೇತ್ರದ ಮತದಾರರು ನನ್ನ ಕೈ ಹಿಡಿದು ಮುಂದಿನ ದಿನಗಳಲ್ಲಿ ಹೆಚ್ಚು ಅಭಿವೃದ್ದಿ ಕಾರ್ಯಗಳನ್ನು ಮಾಡಲು ಅನುಕೂಲಮಾಡಿಕೂಟ್ಟಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಪಂ ಮಾಜಿ ಅಧ್ಯಕ್ಷ ರಾಜೂಗೌಡ, ಮುಖಂಡ ಮಾದೇಶ್, ನಟರಾಜು, ಗಿರೀಶ್ ಹಾಗೂ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News