ಬೇನಾಮಿ ಹೆಸರಿನ ಪತ್ರಿಕೆ ಮೂಲಕ ಬಿಜೆಪಿ ಅಪಪ್ರಚಾರ: ಕಾಂಗ್ರೆಸ್ ಮುಖಂಡ ಎಂ.ಎಸ್.ಅನಂತ್

Update: 2018-05-16 12:31 GMT

ಮೂಡಿಗೆರೆ, ಮೇ 16: ಚುನಾವಣೆಗೆ 2 ದಿನ ಬಾಕಿ ಇರುವಂತೆ ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬೇನಾಮಿ ಹೆಸರಿನಲ್ಲಿ ಅಪಪ್ರಚಾರದ ಪತ್ರಿಕೆಯನ್ನು ಮುದ್ರಿಸಿ ಹಂಚುವ ಮೂಲಕ ವಾಮಾ ಮಾರ್ಗ ಅನುಸರಿಸಿ ಬಿಜೆಪಿ ಜಯಗಳಿಸಿದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಎಂ.ಎಸ್.ಅನಂತ್ ಆರೋಪಿಸಿದ್ದಾರೆ. 

ಈ ಕುರಿತು ಬುಧವಾರ ಹೇಳಿಕೆ ನೀಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಜೆಡಿಎಸ್‍ನ ಪಾಪದ ಕೂಸಾಗಿದೆ. ಚುನಾವಣೆಗೆ 2 ದಿನ ಬಾಕಿ ಇರುವಂತೆ ಜೆಡಿಎಸ್ ಕಣದಿಂದ ಹಿಂದೆ ಸರಿದಂತೆ ನಾಟಕವಾಡಿದ್ದು, ಜೆಡಿಎಸ್ ಮತಗಳು ಬಿಜೆಪಿಯತ್ತ ತಿರುಗಲು ಸಹಕಾರಿಯಾಯಿತು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಅಪಪ್ರಚಾರದ ಕರಪತ್ರಗಳನ್ನು ಹಂಚಿ ಜನರನ್ನು ವಂಚಿಸಿ, ಗೆಲುವು ಪಡೆಯಲಾಗಿದೆ ಎಂದು ದೂರಿದ್ದಾರೆ. 

ಕಾಂಗ್ರೆಸ್ ಪಕ್ಷವು 46 ಸಾವಿರ ಮತ ಪಡೆಯುವ ಮೂಲಕ ಪ್ರಬಲವಾದ ಪೈಪೋಟಿ ನೀಡಿದೆ. ಇಷ್ಟೊಂದು ಮತಗಳು ಬರಲು ಕಾರಣಕರ್ತರಾದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರನ್ನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕ ಬರುವ ನಿರೀಕ್ಷೆ ಇದ್ದು, ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ನಿರಂತರವಾಗಿರುತ್ತದೆ. ಇದರಿಂದ ಕಾರ್ಯಕರ್ತರು ದೃತಿಗೆಡಬೇಕಾಗಿಲ್ಲ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News