ಇಡಿ ಮೂಲಕ ಬಿಜೆಪಿ ಬೆದರಿಸುತ್ತಿದೆ: ಕುಮಾರಸ್ವಾಮಿ
Update: 2018-05-17 11:11 IST
ಬೆಂಗಳೂರು, ಮೇ 17: ಜಾರಿ ನಿರ್ದೇಶನಾಲಯ(ಇಡಿ) ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಬೆದರಿಸುತ್ತಿದೆ. ಆನಂದ್ ಸಿಂಗ್ ವಿರುದ್ಧ ಬಿಜೆಪಿ ಬೆದರಿಕೆ ತಂತ್ರ ಅನುಸರಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಇಡಿ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರನ್ನು ಬೆದರಿಸುತ್ತಿದೆ. ಇಡಿಯನ್ನು ಬಳಸಿಕೊಂಡು ಆನಂದ್ ಸಿಂಗ್‌ರನ್ನು ಕರೆದುಕೊಂಡು ಹೋಗಿದ್ದಾರೆ. ಬಿಜೆಪಿಯು ರಾಜಭವನವನ್ನು ದುರುಪಯೋಗಪಡಿಸಿಕೊಂಡಿದೆ. ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಬಿಜೆಪಿಗೆ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದೇಕೆ? ಇದರಿಂದ ಕುದುರೆ ವ್ಯಾಪಾರ ಆಗುವುದಿಲ್ಲವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ