ಕರ್ನಾಟಕ ರಾಜ್ಯಪಾಲರ ಕ್ರಮ ಖಂಡಿಸಿ ಹೈಕೋರ್ಟ್‌ಗೆ ಪಿಐಎಲ್
Update: 2018-05-17 13:24 IST
ಬೆಂಗಳೂರು, ಮೇ 12: ಸರಕಾರ ರಚಿಸಲು ಬಿಎಸ್ ಯಡಿಯೂರಪ್ಪರಿಗೆ ರಾಜ್ಯಪಾಲ ವಿಆರ್ ವಾಲಾ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ವಕೀಲ ಎನ್‌ಪಿ ಅಮೃತೇಶ್ ಪಿಐಎಲ್ ಸಲ್ಲಿಸಿದ್ದು, ಸರಕಾರ ರಚನೆಗೆ ಬಿಎಸ್‌ವೈಗೆ ಆಹ್ವಾನ ನೀಡಿದ್ದು ಕಾನೂನು ಬಾಹಿರ ಎಂದು ಘೋಷಿಸಬೇಕು. ಶಾಸಕರ ಪಕ್ಷಾಂತರಕ್ಕೆ ನಿರ್ಬಂಧ ಹೇರುವಂತೆಯೂ ಮನವಿ ಮಾಡಿದ್ದಾರೆ.