ಚಿಕ್ಕಮಗಳೂರು: ಬೈಕ್-ಕಾರು ಮುಖಾಮುಖಿ ಢಿಕ್ಕಿ; ಇಬ್ಬರು ಮೃತ್ಯು
Update: 2018-05-18 19:27 IST
ಚಿಕ್ಕಮಗಳೂರು, ಮೇ 18: ಪಲ್ಸರ್ ಬೈಕ್ ಹಾಗೂ ವ್ಯಾಗನರ್ ಕಾರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಸವಾರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ರಾಂಪುರ ಗೇಟ್ ಬಳಿ ನಡೆದಿದೆ.
ಮೃತರು ತರೀಕೆರೆ ತಾಲೂಕಿನ ಎಲುಗೆರೆ ನಿವಾಸಿಗಳಾದ ದೀಪಕ್, ಹೇಮಂತ್ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿನೀಡಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ.