ಬಿಜೆಪಿ ಸಮರ್ಥಕರ ಸಂಖ್ಯೆ 104 ದಾಟುವುದಿಲ್ಲ: ಮಾಜಿ ಸಚಿವ ರಾಮಲಿಂಗಾ ರೆಡ್ಡಿ
Update: 2018-05-19 10:04 IST
ಬೆಂಗಳೂರು, ಮೇ 19: ನಮ್ಮ ಎಲ್ಲ ಶಾಸಕರು ನಮ್ಮ ಜೊತೆ ಇದ್ದಾರೆ. ಇಬ್ಬರು ಮಾತ್ರ ನಮ್ಮ ಜೊತೆ ಭೌತಿಕವಾಗಿ ಇರಲಿಲ್ಲ. ಅವರು ಇಂದು ನಮ್ಮ ಜತೆ ಬರುತ್ತಾರೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಬಿಜೆಪಿ ಸಮರ್ಥಕರ ಸಂಖ್ಯೆ 104 ದಾಟುವುದಿಲ್ಲ. ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ. ಆಮೇಲೆ ಮೈತ್ರಿಕೂಟದ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
“ಗಣಿಧಣಿಗಳು ಆಪರೇಶನ್ ಕಮಲ ಮಾಡಲು ಹೊರಟಿದ್ದಾರೆ. ಪ್ರತಿಯೊಬ್ಬರಿಗೂ 100-150 ಕೋಟಿ ರೂ. ಆಫರ್ ಮಾಡಿದ್ದಾರೆ. ಇಷ್ಟು ದುಡ್ಡು ಕೊಡಬೇಕಾದರೆ. ಅವರು ಎಷ್ಟು ದುಡ್ಡು ಮಾಡಿರಬೇಕು. ಇವರಿಗೆ ಅಧಿಕಾರ ಕೊಟ್ಟರೆ ರಾಜ್ಯವನ್ನು ಗುಡಿಸಿ ಹಾಕುತ್ತಾರೆ. ಮೋದಿ, ಶಾ ಅವರ ಯಾವ ಕುತಂತ್ರವೂ ನಡೆಯುವುದಿಲ್ಲ ಎಂದು ಹೇಳಿದರು.