ಜೆಡಿಎಸ್ ನಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಕಾಂಗ್ರೆಸ್ ನಲ್ಲೂ ಇಲ್ಲ: ಕುಮಾರಸ್ವಾಮಿ
Update: 2018-05-19 10:44 IST
ಬೆಂಗಳೂರು, ಮೇ 19: ನಮ್ಮಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಕಾಂಗ್ರೆಸ್ ನಲ್ಲೂ ಯಾವುದೇ ಸಮಸ್ಯೆ ಇಲ್ಲ. ಎಲ್ಲ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ ಎಂದು ಮಾಜಿ ಮುಖ್ಯ ಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಎಸ್ ಯಡಿಯೂರಪ್ಪ ವಿಶ್ವಾಸ ಮತ ಯಾಚನೆಯಲ್ಲಿ ಸೋಲುತ್ತಾರೆ ಎಂದು ಕುಮಾರಸ್ವಾಮಿ ನುಡಿದರು.
ಪ್ರತಿಯೊಬ್ಬರಿಗೂ ಆಶಾವಾದ ಇದ್ದೇ ಇರುತ್ತದೆ. ಸಂಜೆ 4 ಗಂಟೆಯವರೆಗೆ ಬಿಜೆಪಿ ನಾಯಕರು ನಮ್ಮ ಶಾಸಕರಿಗಾಗಿ ಗಾಳ ಹಾಕುತ್ತಾರೆ. ಅವರು ಆಶಾವಾದ ಹೊಂದಿರುವುದು ತಪ್ಪಲ್ಲ ಎಂದರು.
ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಸಿಎಲ್ ಪಿ ನಾಯಕರಾಗಿ ಆಯ್ಕೆಯಾಗಿರುವುದನ್ನು ಸ್ವಾಗತಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.