×
Ad

ಹಂಗಾಮಿ ಸ್ಪೀಕರ್ ಬೋಪಯ್ಯ ವಿರುದ್ಧದ ಅರ್ಜಿ ವಜಾ

Update: 2018-05-19 11:18 IST

ಹೊಸದಿಲ್ಲಿ, ಮೇ 19:  ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಶಾಸಕರಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸುಪ್ರಿಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾಗೊಂಡಿದೆ. 

ಕಾಂಗ್ರೆಸ್ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ  ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಮುಂದುವರಿಯಲಿದ್ದಾರೆ ಎಂದು ಆದೇಶಿಸಿದೆ.

ಇದರೊಂದಿಗೆ ವಿಶ್ವಾಸ ಮತ ಯಾಚನೆ ಕಲಾಪವನ್ನು ನಡೆಸಿಕೊಡುವುದಕ್ಕೆ ಬೋಪಯ್ಯ ಅವರಿಗಿದ್ದ ಅಡ್ಡಿ ನಿವಾರಣೆಯಾಗಿದೆ.

ಹಿರಿಯ ಶಾಸಕರನ್ನು ಸ್ಪೀಕರ್ ಆಗಿ ನೇಮಕ ಮಾಡುವುದು ಜಾಗತಿಕ ಸಂಪ್ರದಾಯ. ಆದರೆ ಕಿರಿಯ ಶಾಸಕರಾದ ಬೋಪಯ್ಯ ರನ್ನು ಸ್ಪೀಕರ್ ಆಗಿ ನೇಮಿಸಿರುವುದು ಅಸಮಂಜಸ.  ಅವರ ಟ್ರ್ಯಾಕ್ ರೆಕಾರ್ಡ್  ಸರಿ ಇಲ್ಲ ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.

ಬೋಪಯ್ಯ ಪ್ರಮಾಣವಚನ ಬೋಧಿಸುವುದು ಸರಿ. ಆದರೆ ವಿಶ್ವಾಸ ಮತದ ಯಾಚನೆಯ ಮೇಲ್ವಿಚಾರಣೆ  ಸರಿ ಅಲ್ಲ ಎಂದು ಸಿಬಲ್ ಹೇಳಿದರು.

ಕೆಲವೊಮ್ಮೆ  ಹಿರಿಯ ಶಾಸಕರನ್ನು ಆಯ್ಕೆ ಮಾಡಲಾಗಿಲ್ಲ . ಹಿರಿತನ ಅಂದರೆ ವಯಸ್ಸು ಅಲ್ಲ. ಹೆಚ್ಚು ಬಾರಿ ಶಾಸಕರಾಗಿ ಆಯ್ಕೆ  ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅಭಿಪ್ರಾಯಪಟ್ಟರು.  ನ್ಯಾಯಮೂರ್ತಿಯವರ   ವಾದವನ್ನು ವಕೀಲರಾದ ಮುಕುಲ್ ರೋಹ್ಟಗಿ ಬೆಂಬಲಿಸಿದರು.

ಕಾಂಗ್ರೆಸ್ ವಾದ ಗೊಂದಲದಿಂದ ಕೂಡಿರುವ ಹಿನ್ನೆಲೆಯಲ್ಲಿ ತ್ರಿಸದಸ್ಯ ಪೀಠ ತಿರಸ್ಕರಿಸಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News