×
Ad

ವಿಧಾನಸಭೆಯ ಕಲಾಪ ಆರಂಭ; ಇಬ್ಬರು ಶಾಸಕರು ಗೈರು

Update: 2018-05-19 11:41 IST

ಬೆಂಗಳೂರು, ಮೇ 19: ವಂದೇ ಮಾತರಂ ಗೀತೆಯೊಂದಿಗೆ ರಾಜ್ಯ ವಿಧಾನ ಸಭೆಯ ಕಲಾಪ ಆರಂಭಗೊಂಡಿತು. 

ನೂತನ ಶಾಸಕರಿಗೆ ಹಂಗಾಮಿ  ಸ್ವೀಕರ್ ಕೆ.ಜಿ ಬೋಪಯ್ಯ ಪ್ರಮಾಣವಚನ ಬೋಧಿಸಿದರು.

ಮೊದಲಿಗೆ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದರು. ಹಿರಿಯ ಶಾಸಕರು ಮೊದಲು ಪ್ರತಿಜ್ಞಾ ಸ್ವೀಕರಿಸಿದರು.

ಒಟ್ಟು   218 ಶಾಸಕರು ಸದನಕ್ಕೆ  ಹಾಜರಾಗಿದ್ದಾರೆ. ಬಿಜೆಪಿಯ  104ರಲ್ಲಿ 104 ಶಾಸಕರು, ಕಾಂಗ್ರೆಸ್ 78ರಲ್ಲಿ 76 ಶಾಸಕರು  ಹಾಜರಾಗಿದ್ದಾರೆ. ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೇಲ್ ಮತ್ತು ವಿಜಯ ನಗರ ಶಾಸಕ ಆನಂದ್ ಸಿಂಗ್ ಗೈರು ಹಾಜರಾಗಿದ್ದಾರೆ. 

ಜೆಡಿಎಸ್ 37  ಶಾಸಕರ ಪೈಕಿ 37  ಶಾಸಕರು ಸದನಕ್ಕೆ ಆಗಮಿಸಿದ್ದಾರೆ. ಜೆಡಿಎಸ್ ನ ಹೆಚ್ ಡಿ ರೇವಣ್ಣ  ತಡವಾಗಿ ಬರಿಗಾಲಲ್ಲಿ ಸದನಕ್ಕೆ ಆಗಮಿಸಿದ್ದಾರೆ. ಪಕ್ಷೇತರ  ಇಬ್ಬರು ಶಾಸಕರ ಪೈಕಿ ಇಬ್ಬರು ಹಾಜರಾಗಿದ್ದಾರೆ.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News