ಪೊಲೀಸ್ ರಕ್ಷಣೆ ಕೇಳಿದ ಇಬ್ಬರು ಶಾಸಕರು ?

Update: 2018-05-19 07:58 GMT

ಬೆಂಗಳೂರು, ಮೇ 19: ನಾಪತ್ತೆಯಾಗಿರುವ ಕಾಂಗ್ರೆಸ್ ನ ಇಬ್ಬರು ಶಾಸಕರು ಗೋಲ್ಡ್ ಫಿಂಚ್  ಹೋಟೆಲ್ ನಲ್ಲಿ ಇದ್ದಾರೆಂಬ ಮಾಹಿತಿ ಲಭಿಸಿದ್ದು, ಅವರನ್ನು ಪತ್ತೆ ಹಚ್ಚಲು ಇದೀಗ ಪೊಲೀಸರು ಹೋಟೆಲ್ ಗೆ ತೆರಳಿದ್ದಾರೆ. 

ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎಸ್ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್   ಅವರು ಹೋಟೆಲ್ ಗೆ ಭೇಟಿ ನೀಡಿದ್ದಾರೆ.

 ಇಬ್ಬರು ಶಾಸಕರು ವಿಮಾನದಲ್ಲಿ ಸೋಮಶೇಖರ್ ರೆಡ್ಡಿ ಜೊತೆ ಬಂದಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ವಿಜಯ ನಗರದ  ಶಾಸಕ ಆನಂದ್ ಸಿಂಗ್ ಮತ್ತು ಕಂಪ್ಲಿಯ  ಶಾಸಕ ಪ್ರತಾಪ್ ಗೌಡ ಪಾಟೀಲ್  ಅವರು ಬಿಜೆಪಿಯ ಸೋಮಶೇಖರ್ ರೆಡ್ಡಿ ವಶದಲ್ಲಿ ಇಬ್ಬರು ಶಾಸಕರು ಇದ್ದಾರೆಂಬ ಮಾಹಿತಿ ಲಭಿಸಿದೆ. ಅವರು ಸದನಕ್ಕೆ ಆಗಮಿಸಲು ಪೊಲೀಸರ ರಕ್ಷಣೆ ಕೇಳಿದ್ದಾರೆಂದು ತಿಳಿದು ಬಂದಿದೆ.

ಇದೇ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ನಿರ್ಧಾರದ ಪರ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಿದ್ದಾರೆ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News