ವಿಜಯಪುರ: ಹೆದ್ದಾರಿ ಸಮೀಪ 8 ವಿವಿಪ್ಯಾಟ್ ಗಳು ಪತ್ತೆ?

Update: 2018-05-20 14:58 GMT

ವಿಜಯಪುರ, ಮೇ 20:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಬಳಕೆ ಮಾಡಿದ್ದು ಎನ್ನಲಾದ ವಿವಿ ಪ್ಯಾಟ್‌ಗಳು ಪತ್ತೆಯಾಗಿದ್ದು, ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಕೇಳಿಬರುತ್ತಿದೆ.

ಬಿಜಾಪುರ-ಬೆಂಗಳೂರು ಹೆದ್ದಾರಿ ರಸ್ತೆಯ ಸಮೀಪದ ಬಸನಬಾಗೇವಾಡಿಯ ತಾಲೂಕಿನ ಮನಗೋಳಿ ಗ್ರಾಮದ ಸೇತುವೆ ಪಕ್ಕದಲ್ಲಿ ಇವಿಎಂ ಯಂತ್ರಗಳು ವಿವಿ ಪ್ಯಾಟ್‌ಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ವಿವಿ ಪ್ಯಾಟ್‌ಗಳನ್ನು ಕಂಡ ಸ್ಥಳೀಯರು ಅದನ್ನು ರಕ್ಷಿಸಿ ಶೆಡ್‌ಯೊಂದಲ್ಲಿ ಸಂಗ್ರಹಿಸಿಟ್ಟು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಎಂಟು ವಿವಿ ಪ್ಯಾಟ್‌ಗಳನ್ನು ಹಾಗೂ ಕೆಲ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದು, ಮನಗೂಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಮಾಹಿತಿ: ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕಂಡ ವಿವಿ ಪ್ಯಾಟ್ ಯಂತ್ರಗಳನ್ನು ಹೆದ್ದಾರಿ ಕಾಮಗಾರಿಯ ಕಾರ್ಮಿಕರು ಕಂಡು ಆತಂಕಗೊಂಡಿದ್ದರು. ಬಳಿಕ ಗ್ರಾಮಕ್ಕೆ ತೆರಳಿ ಜನರಿಗೆ ತಿಳಿಸಿದ್ದರು, ನೂರಾರು ಜನ ಸ್ಥಳಕ್ಕೆ ಜಮಾಯಿಸಿದರು.

ವೈರಲ್: ಮನಗೂಳಿಯಲ್ಲಿ ಚುನಾವಣೆಗೆ ಬಳಸಲಾದ ಎನ್ನುವ ವಿವಿ ಪ್ಯಾಟ್‌ಗಳನ್ನು ಪತ್ತೆಯಾಗುತ್ತಿದ್ದಂತೆಯ, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಕೆಲವರು ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಮಾಡಿ, ವಿವಿ ಪ್ಯಾಟ್‌ಗಳನ್ನು ಬಿಸಾಡಿ ಹೋಗಿದ್ದಾರೆಂದು ಆರೋಪಿಸುತ್ತಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೂರಾರು ಸಾರ್ವಜನಿಕರು ಭೇಟಿ ನೀಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News