ಮೈಸೂರು: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ಮೂವರ ಬಂಧನ
Update: 2018-05-20 21:17 IST
ಮೈಸೂರು,ಮೇ.20: ಮೈಸೂರು ನಗರ ಸಿ.ಸಿ.ಬಿ ಪೊಲೀಸರ ಮಾಹಿತಿ ಮೇರೆಗೆ ಕುವೆಂಪುನಗರ ಪೊಲೀಸರು ಶಾರದಾ ಪಬ್ಲಿಕ್ ಶಾಲೆ ಹಿಂಭಾಗ ಇರುವ ಮನೆ ನಂ 476 ರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ವೇಶ್ಯಾವಾಟಿಕೆ ನಡೆಸಲು ಸಹಾಯ ಮಾಡುತ್ತಿದ್ದ ಬಿ. ರಘು (24 ) ವೇಶ್ಯಾವಾಟಿಕೆಗೆ ತೊಡಗಿದ್ದ ಎನ್. ವಿಕ್ರಮ್ ( 29 ಆರ್. ಶ್ರೀನಿವಾಸಬಾಬು (36) ಎಂಬುವರನ್ನು ದಸ್ತಗಿರಿ ಮಾಡಿ, ಇವರಿಂದ ವೇಶ್ಯಾವಾಟಿಕೆಗೆ ಬಳಕೆಯಾಗಿದ್ದ 5,380ರೂ. ನಗದು ಹಾಗೂ 4 ಮೊಬೈಲ್ ಫೋನ್‍ಗಳು ಮತ್ತು 01 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ವಿಚಾರಣೆ ವೇಳೆ ತಮ್ಮಣ್ಣೇಗೌಡ ಎಂಬವರು ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ತಿಳಿದು ಬಂದಿದ್ದು, ಈತನ ಪತ್ತೆ ಕಾರ್ಯ ಮುಂದುವರೆದಿದೆ. ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.