ಟ್ರಂಪ್ ತಂಡದ ಮೇಲೆ ಎಫ್‌ಬಿಐ ಬೇಹುಗಾರಿಕೆ ನಡೆಸಿತ್ತೇ?: ತನಿಖೆಗೆ ಕಾನೂನು ಇಲಾಖೆ ಮೇಲೆ ಒತ್ತಡ ಹೇರಿದ ಟ್ರಂಪ್

Update: 2018-05-21 17:36 GMT

ವಾಶಿಂಗ್ಟನ್, ಮೇ 21: ತನ್ನ 2016ರ ಅಧ್ಯಕ್ಷೀಯ ಪ್ರಚಾರ ಅಭಿಯಾನದ ಮೇಲೆ ಅಮೆರಿಕದ ಅತ್ಯುನ್ನತ ತನಿಖಾ ಸಂಸ್ಥೆ ಎಫ್‌ಬಿಐ ಬೇಹುಗಾರಿಕೆ ನಡೆಸಿತ್ತೆ ಎಂಬ ಬಗ್ಗೆ ಕಾನೂನು ಇಲಾಖೆ ತನಿಖೆ ನಡೆಸಬೇಕು ಎಂದು ತಾನು ಒತ್ತಾಯಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ರಾಜಕೀಯ ಕಾರಣಗಳಿಗಾಗಿ ಟ್ರಂಪ್ ಪ್ರಚಾರ ಅಭಿಯಾನದ ಒಳಗೆ ಎಫ್‌ಬಿಐ ನುಸುಳಿತ್ತೆ ಅಥವಾ ಅದರ ಮೇಲೆ ನಿಗಾ ಇಟ್ಟಿತ್ತೆ? ಹಾಗೂ ಒಬಾಮ ಆಡಳಿತದಲ್ಲಿದ್ದ ಯಾರಾದರೂ ಇಂಥ ಬೇಡಿಕೆಯಗಳನ್ನು ಅಥವಾ ಮನವಿಗಳನ್ನು ಮಾಡಿದ್ದರೆ ಎಂಬ ಬಗ್ಗೆ ಕಾನೂನು ಇಲಾಖೆ ತನಿಖೆ ನಡೆಸಬೇಕು ಎಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ ಹಾಗೂ ನಾಳೆ ಇದನ್ನು ಅಧಿಕೃತವಾಗಿ ಮಾಡುತ್ತೇನೆ’’ ಎಂದು ಟ್ರಂಪ್ ರವಿವಾರ ಟ್ವೀಟ್ ಮಾಡಿದ್ದಾರೆ.

ಟ್ರಂಪ್‌ರ ಈ ಬೇಡಿಕೆ ಕಾನೂನು ಇಲಾಖೆಯ ಮೇಲೆ ಮತ್ತಷ್ಟು ಒತ್ತಡ ಹೇರಿದೆ.

ಟ್ರಂಪ್ ಪ್ರಚಾರ ತಂಡವು ರಶ್ಯದೊಂದಿಗೆ ಸಂಪರ್ಕ ಹೊಂದಿತ್ತೆ ಎಂಬ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮುಲ್ಲರ್ ತನಿಖೆ ನಡೆಸುತ್ತಿರುವುದನ್ನು ಸ್ಮರಿಸಬಹುದಾಗಿದೆ. ಈ ತನಿಖೆಯು ಟ್ರಂಪ್ ಮೇಲೆ ಅಗಾಧ ಒತ್ತಡ ಹೇರಿರುವುದನ್ನೂ ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News