ಮಡಿಕೇರಿ: ಆನೆ ದಾಳಿ; ಬೈಕ್ ಸವಾರ ಪ್ರಾಣಪಾಯದಿಂದ ಪಾರು
Update: 2018-05-23 17:30 IST
ಮಡಿಕೇರಿ,ಮೇ.23: ಒಂಟಿ ಸಲಗವೊಂದು ದಾಳಿ ಮಾಡಿದ ಪರಿಣಾಮ ಸ್ವಲ್ಪದರಲ್ಲೇ ಬೈಕ್ ಸವಾರರೊಬ್ಬರು ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಮಾಲ್ದಾರೆ ಸಮೀಪ ಗುಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಜೀವನ್ ಎಂಬುವವರೇ ಕಾಡಾನೆ ದಾಳಿಯಿಂದ ಪಾರಾದ ಬೈಕ್ ಸವಾರ. ಕಾಫಿ ತೋಟದಿಂದ ಹೊರ ಬಂದ ಕಾಡಾನೆ ದಿಢೀರ್ ಆಗಿ ಜೀವನ್ ಅವರ ಮೇಲೆರಗಿದೆ. ಅದೃಷ್ಟವಶಾತ್ ಅವರು ಬೈಕ್ ನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಈ ಸಂದರ್ಭ ಒಂಟಿ ಸಲಗ ಬೈಕ್ ನ್ನು ಜಖಂಗೊಳಿಸಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಾರ್ಯಾಚರಣೆಯ ಭರವಸೆ ನೀಡಿದ್ದಾರೆ.